‘ಸೀರೆ’ಗಾಗಿ ಮಗನ ಪ್ರಾಣವನ್ನೇ ಪಣಕ್ಕಿಟ್ಟ ಮಹಾತಾಯಿ!!

Share the Article

ಅಮ್ಮಾ ಅಂದ್ರೇನೆ ಕಾಳಜಿ ಎಂದು ಹೇಳಬಹುದು. ಪ್ರತಿಯೊಬ್ಬರ ಅಮ್ಮಂದಿರು ಕೂಡ ತನ್ನ ಮಕ್ಕಳು ಯಾವುದೇ ಕಷ್ಟವಿಲ್ಲದೆ ಜೀವನ ಸಾಗಿಸಬೇಕೆಂದು ತಮಗಾಗಿ ಏನನ್ನೂ ಮುಡಿಪಾಗಿರಿಸದೆ ತನ್ನ ಕರುಳ ಬಳ್ಳಿಗಳ ಖುಷಿಯಲ್ಲಿ ತಾನು ಸುಖ ಕಾಣುತ್ತಾಳೆ. ಆದರೆ ಇಲ್ಲೊಂದು ಮಹಿಳೆಗೆ ಮಗನಿಗಿಂತ ‘ ಸೀರೆ ‘ ಮುಖ್ಯವಂತೆ!!

ಹೌದು.ಈ ಮಹಾತಾಯಿ ತನ್ನ ಸೀರೆಗಾಗಿ ಮಗನ ಪ್ರಾಣವನ್ನೇ ಪಣಕ್ಕಿಟ್ಟಿದ್ದಾಳೆ.ಅಪಾರ್ಟ್​ಮೆಂಟ್​​ನ 10ನೇ ಮಹಡಿಯಿಂದ 9ನೇ ಮಹಡಿಗೆ ಬಿದ್ದ ಸೀರೆಯನ್ನ ತಾಯಿಯೊಬ್ಬಳು ಮಗನನ್ನು ಮತ್ತೊಂದು ಸೀರೆಯಲ್ಲಿ ನೇತುಹಾಕಿ ಕೆಳಗಿಳಿಸಿರುವ ಆಘಾತಕಾರಿ ಘಟನೆ ಬಳಕಿಗೆ ಬಂದಿದೆ.

ಹರಿಯಾಣದ ಫರಿದಾಬಾದ್​ನಲ್ಲಿ ಈ ಘಟನೆ ನಡೆದಿದ್ದು, ವಿಡಿಯೋ ವೈರಲ್ ಆಗಿದೆ. 9ನೇ ಮಹಡಿಯಲ್ಲಿ ಬಿದ್ದ ತನ್ನ ಸೀರೆ ಮೇಲೆತ್ತಲು ಮಗನನ್ನು ಸೀರೆಯಿಂದ ಕೆಳಗಿಳಿಸಿದ್ದಾಳೆ. ಇದನ್ನು ಮುಂದಿನ ಅಪಾರ್ಟ್​ಮೆಂಟ್​​​​ನ ವ್ಯಕ್ತಿಯೋರ್ವ ಮೊಬೈಲ್​ನಲ್ಲಿ ಸೆರೆಹಿಡಿದಿದ್ದಾನೆ. ಆ ಹುಡುಗ ನಿಧಾನವಾಗಿ ಸೀರೆ ಹಿಡಿದು ಕೆಳಗಿಳಿದು ಅದೇ ಸೀರೆಯಿಂದ ಮತ್ತೆ ಮೇಲೆ ಬಂದಿದ್ದಾನೆ. ತಾಯಿಯ ಈ ಕೃತ್ಯ ಕಂಡು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

Leave A Reply