ಮಾನಸಿಕ ಅಸ್ವಸ್ಥನ ಬಂಧನದಲ್ಲಿದ್ದ ಒಂಟಿ ಮಹಿಳೆಯ ಜೀವವನ್ನೇ ಕಾಪಾಡಿತು ಆನ್ಲೈನ್ ಗೇಮ್!
ಆನ್ಲೈನ್ ಗೇಮ್ ಹುಚ್ಚು ನಿಜವಾಗಿ ಪ್ರಾಣಕ್ಕೆ ಹಾನಿಯೆಂದೆ ಹೇಳಬಹುದು. ಆದ್ರೆ ಕೆಲವೊಂದು ಬಾರಿ ಅದೃಷ್ಟ ಚೆನ್ನಾಗಿದ್ರೆ ನರಕನೂ ಸ್ವರ್ಗ ಆಗೋ ಲಕ್ಷಣ ಜಾಸ್ತಿ ಇರುತ್ತೆ ಅಲ್ವಾ? ಇದೇ ರೀತಿ ಇಲ್ಲೊಂದು ಪ್ರಾಣಕ್ಕೆ ಕುತ್ತಾಗ ಬೇಕಿದ್ದ ಗೇಮ್ ಅಡ್ಡಿಕ್ಷನ್ ಬದುಕುಳಿಯುವುದೇ ಕಷ್ಟ ಅಂದುಕೊಂಡಿದ್ದ ಒಂಟಿ ಮಹಿಳೆಯ ಜೀವವನ್ನೇ ಕಾಪಾಡಿದೆ!!
ಇತ್ತೀಚೆಗೆ ಅಂತೂ ಆನ್ಲೈನ್ ಗೇಮ್ ಗಳು ವಿಧ-ವಿಧ ರೀತಿಯಲ್ಲಿ ಇರುತ್ತೆ.ಇದರಲ್ಲಿ ಒಗಟನ್ನು ಪರಿಹರಿಸುವ ಆಟಕ್ಕೆ ಜನರು ಮನಸೋತಿದ್ದಾರೆ.ಇಂಥದ್ದೇ ವರ್ಡ್ ಲೇ ಆಟಕ್ಕೂ ಜನರು ವ್ಯಸನಿಯಾಗಿದ್ದಾರೆ ಎಂದು ಹೇಳಿದ್ರೆ ತಪ್ಪಾಗಲಾರದು.ಈ ವೈರಲ್ ಆಟವು 80 ವರ್ಷದ ವೃದ್ಧೆಯ ಜೀವವನ್ನು ಉಳಿಸಿದೆ. ಹೇಗೆ ಗೊತ್ತಾ..?
ಚಿಕಾಗೋದ ಲಿಂಕನ್ವುಡ್ ನಿವಾಸಿಯಾಗಿರುವ ಡೆನಿಸ್ ಹಾಲ್ಟ್ ಮಲಗಿದ್ದಾಗ ಮಾನಸಿಕ ಅಸ್ವಸ್ಥ ಆಕೆಯ ಮನೆಗೆ ನುಗ್ಗಿದ್ದಾನೆ. ಫೆಬ್ರವರಿ 5 ರಂದು ಈ ಘಟನೆ ಸಂಭವಿಸಿದೆ. ಒಳನುಗ್ಗಿದ 32 ವರ್ಷದ ಯುವಕ ಡೆನಿಸ್ಗೆ ಕತ್ತರಿ ತೋರಿಸಿ ಹೆದರಿಸಿದ್ದಾನೆ. ಹಾಗೂ ಆಕೆಯನ್ನು ನೆಲಮಾಳಿಗೆಯಲ್ಲಿ ಲಾಕ್ ಮಾಡಿದ್ದಾನೆ.
ಈ ವೇಳೆ ಸಿಯಾಟಲ್ನಲ್ಲಿ ವಾಸಿಸುವ ಡೆನಿಸ್ ಅವರ ಹಿರಿಯ ಮಗಳು ಮೆರೆಡಿತ್, ದೈನಂದಿನ ಪದ ಒಗಟು ಆಟಕ್ಕೆ ಪರಿಹಾರವನ್ನು ತಾಯಿ ಯಾಕೆ ಕಳುಹಿಸಿಲ್ಲ ಎಂದು ಯೋಚಿಸಿದ್ದಾರೆ. ಏನೋ ತಪ್ಪಾಗಿದೆ ಎಂದರಿತ ಅವರು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಈ ವೇಳೆ ಮನೆಯೊಳಗೆ ಹೊಕ್ಕ ಪೊಲೀಸರು, 17 ಗಂಟೆಗಳ ಕಾಲ ವೃದ್ಧೆಯನ್ನು ಬಂಧನದಲ್ಲಿಟ್ಟಿದ್ದ ಆತನನ್ನು ಕೂಡಲೇ ಬಂಧಿಸಿದ್ದಾರೆ.
ಅದೃಷ್ಟವಶಾತ್ ಮಹಿಳೆಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.ಅವರು ಸುರಕ್ಷಿತವಾಗಿದ್ದಾರೆ.ಇದರಿಂದ ಸಾಕಷ್ಟು ಭೀತಿಗೊಂಡಿದ್ದ ಡೆನಿಸ್, ತಾನು ಬದುಕುತ್ತೇನೆ ಎಂದು ಭಾವಿಸಿರಲಿಲ್ಲ ಎಂದು ಹೇಳಿದ್ದಾರೆ.ಒಟ್ಟಾರೆ ಅನಿಶ್ಚಿತವಾಗಿ ಒಂದು ಆಟವು ಮಹಿಳೆಯನ್ನು ಹೇಗೆ ಕಾಪಾಡಿತು ಅಲ್ವಾ..?