ಆರತಕ್ಷತೆ ಸಮಯದಲ್ಲಿ ದಿಢೀರ್ ಕುಸಿದು ಬಿದ್ದ ವಧು| ಆಸ್ಪತ್ರೆಗೆ ದಾಖಲಿಸಿದಾಗ ತಿಳಿಯಿತು ಆಘಾತಕಾರಿ ವಿಷಯ| ಸಂಕಷ್ಟದಲ್ಲೂ ಮಾನವೀಯತೆ ಮೆರೆದ ಪೋಷಕರು

Share the Article

ಆಕೆ ಇನ್ನೇನು ಹೊಸ ಜೀವನಕ್ಕೆ ಕಾಲಿಡುತ್ತಿದ್ದಳು. ತನ್ನ ಮದುವೆಯ ಬಗ್ಗೆ ಹಲವು ಕನಸುಗಳನ್ನು ಹೆಣೆದುಕೊಂಡಿದ್ದಳು. ಆದರೆ ವಿಧಿಯ ಆಟ ಬೇರೆನೇ ಇತ್ತು.

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಮೂಲದ ಚೈತ್ರಾ ( 26) ತನ್ನ ಮದುವೆಯ ಆರತಕ್ಷತೆ ಸಮಯದಲ್ಲೇ ಕುಸಿದು ಬಿದ್ದಿದ್ದಾಳೆ. ತೀವ್ರ ಅಸ್ವಸ್ಥಗೊಂಡ ಈಕೆಯನ್ನು ಆ ಕೂಡಲೇ ನಿಮ್ಹಾನ್ಸ್ ಆಸ್ಪತ್ರೆ ದಾಖಲಿಸಲಾಯಿತು. ಆದರೆ ಡಾಕ್ಟರ್ ಆಕೆಯ ಮೆದುಳು ನಿಷ್ಕ್ರಿಯಗೊಂಡಿದೆ ಎಂಬ ಆಘಾತಕಾರಿ ಮಾಹಿತಿಯನ್ನು ನೀಡುತ್ತಾರೆ. ಈ ವಿಷಯ ತಿಳಿದು ಇಡೀ ಕುಟುಂಬ ಬರಸಿಡಿಲು ಬಡಿದಂತೆ ಕೂತಿದೆ.

ಇಂತಹ ಸಮಯದಲ್ಲೂ ಧೃತಿಗೆಡದ ಚೈತ್ರಾ ಪೋಷಕರು ಆಕೆಯ ಅಂಗಾಂಗ ದಾನಕ್ಕೆ ಮುಂದಾಗುತ್ತಾರೆ.

‘ಚೈತ್ರಾ ಬಾಳಲ್ಲಿ ವಿಧಿ ಬೇರೆ ಪ್ಲಾನ್ ಮಾಡಿರುವಂತೆ ಕಾಣುತ್ತದೆ. ಮದುವೆ ಆರತಕ್ಷತೆ ವೇಳೆ ಕುಸಿದುಬಿದ್ದ ಚೈತ್ರಾಳ ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ನಿಮ್ಹಾನ್ಸ್ ವೈದ್ಯರು ತಿಳಿಸಿದ್ದು, ಇಂತಹ ದುರಂತದ ಸಮಯದಲ್ಲೂ ಆಕೆಯ ಅಂಗಾಂಗ ದಾನಕ್ಕೆ ಪಾಲಕರು ನಿರ್ಧರಿಸಿದ್ದಾರೆ’ ಎಂದು ಆರೋಗ್ಯ ಸಚಿವ ಕೆ ಸುಧಾಕರ್ ಟ್ವೀಟ್ ಮಾಡಿದ್ದಾರೆ.

Leave A Reply