ಐಪಿಎಲ್ ಮೆಗಾ ಹರಾಜು ವೇಳೆ ಕುಸಿದು ಬಿದ್ದ ಹರಾಜುದಾರ ಹ್ಯೂ ಎಡ್ಮೆಡ್ಸ್ !!!

Share the Article

ಬೆಂಗಳೂರು : ಐಪಿಎಲ್ ನ ಮೆಗಾ ಹರಾಜು ಸಮಯದಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದೆ. ಆಟಗಾರರ ಹೆಸರು ಕೂಗಿ ಹರಾಜು ಪ್ರಕ್ರಿಯೆ ನಡೆಸುತ್ತಿದ್ದ ಸಂದರ್ಭದಲ್ಲಿ ಹ್ಯೂ ಎಡ್ಮೆಡ್ಸ್ ದಿಢೀರನೆ ಕುಸಿದು ಬಿದ್ದಿದ್ದು, ಗೊಂದಲದ ವಾತಾವರಣ ಉಂಟಾಯಿತು.

ಆರ್ ಸಿಬಿ ಪರವಾಗಿ ಆಡುತ್ತಿದ್ದ ಹಸರಂಗ ಅವರಿಗೆ ಹಲವು ತಂಡಗಳು ಬಿಡ್ ಮಾಡುತ್ತಿರುವಾಗ ಹ್ಯೂ ಎಡ್ಮೆಡ್ ಇದ್ದಕ್ಕಿದ್ದಂತೆ ಕುಸಿದು ಬಿದ್ದದ್ದು ಆತಂಕಕಾರಿ ವಾತಾವರಣ ಉಂಟಾಯಿತು. ಹ್ಯೂ ಎಡ್ಮೆಡ್ ಆರೋಗ್ಯ ಸ್ಥಿತಿಯ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲ.

ಸದ್ಯಕ್ಕೆ ಹರಾಜನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ. ಹ್ಯೂ ಎಡ್ಮೆಡ್ಸ್ ಅವರು 2018 ರಿಂದ ಐಪಿಎಲ್ ನ ಹರಾಜು ಕೂಗುತ್ತಿದ್ದಾರೆ. ಇದು ಅವರ ನಾಲ್ಕನೇ ಐಪಿಎಲ್ ಹರಾಜು.

Leave A Reply