ರೈತನ ಜನಧನ್ ಖಾತೆಗೆ ಬಂತು 15 ಲಕ್ಷ ರೂ.|ಮೋದಿ ಹಣ ಹಾಕಿದ್ದಾರೆ ಅಂದುಕೊಂಡು ಕನಸಿನ ಮನೆ ನಿರ್ಮಿಸಿದ ರೈತ |ಬಳಿಕ ಆತನಿಗೆ ಕಾದಿತ್ತು ಶಾಕ್
ಹಣ ಅಂದ್ರೆ ಯಾರು ತಾನೇ ಸುಮ್ಮನಿರಲಾರ. ಫ್ರೀ ಆಗಿ ಹಣ ಬಂತಲ್ಲ ಅಂತ ಖರ್ಚು ಮಾಡೋದೇ ಜಾಸ್ತಿ. ಅದೇ ರೀತಿ ರೈತರೊಬ್ಬರ ಜನಧನ್ ಖಾತೆಗೆ ಅಚಾನಕ್ ಆಗಿ 15 ಲಕ್ಷ ಜಮೆ ಆಗಿದ್ದು, ಮೋದಿ ಹಣ ಹಾಕಿದ್ದಾರೆ ಅಂದು ಕೊಂಡು ತನ್ನ ಕನಸಿನ ಮನೆಯನ್ನ ನಿರ್ಮಿಸಿಕೊಂಡ. ಆದ್ರೆ ಆತನಿಗೆ ಮತ್ತೆ ಕಾದಿತ್ತು ಶಾಕ್!
ಔರಂಗಾಬಾದ್ನ ಪೈಠಾಣ್ ತಾಲೂಕಿನ ಜ್ಞಾನೇಶ್ವರ್ ಓಟೆ ಅವರ ಜನಧನ್ ಖಾತೆಗೆ 15 ಲಕ್ಷ ಹಣ ಜಮೆ ಆಗಿದೆ. ಇಷ್ಟು ಮೊತ್ತದ ಹಣ ಆತ ಖಾತೆಯಲ್ಲಿ ಕಂಡಾಕ್ಷಣ ಅಚ್ಚರಿಗೊಂಡು ಕೆಲ ತಿಂಗಳು ಕಾಲ ಸುಮ್ಮನಿದ್ದ.ಬಳಿಕ 2014ರ ಲೋಕಸಭಾ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಪ್ರತಿ ನಾಗರಿಕರ ಖಾತೆಗೆ 15 ಲಕ್ಷ ಹಣ ಜಮೆ ಮಾಡುವ ಭರವಸೆ ಅಂತೆ ಹಣ ಹಾಕಿದ್ದಾರೆ ಎಂದು ಸುಮ್ಮನಾದ.ಜೊತೆಗೆ ಇಷ್ಟು ದೊಡ್ಡ ಮೊತ್ತದ ಹಣ ಹಾಕಿದ್ದಕ್ಕೆ ಧನ್ಯವಾದ ಸಲ್ಲಿಸಿ ಅವರಿಗೆ ಪತ್ರವನ್ನು ಬರೆದ. ಆದರೆ, ಕಡೆಗೆ ಆಗಿದ್ದು ಮಾತ್ರ ಆತ ಊಹೆಗೆ ನಿಲುಕದಂತೆ.
ರೈತ ಬಳಿಕವೂ ಖಾತೆಯಲ್ಲಿ ಹಣ ಇರುವುದರಿಂದ ಅನುಮಾನಗೊಂಡು ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿದ್ದಾನೆ. ಈ ವೇಳೆ ಆ ಕಡೆಯಿಂದಲೂ ಯಾವುದೇ ಸರಿಯಾದ ಮಾಹಿತಿ ಸಿಕ್ಕಿಲ್ಲ. ಕಡೆಗೆ ಆತ ಈ ಹಣವನ್ನು ತನ್ನ ಕನಸಿನ ಮನೆ ನಿರ್ಮಾಣ ಮಾಡಲು ಬಳಸಲು ಮುಂದಾಗಿದ್ದಾರೆ. ಮೊದಲಿಗೆ 15 ಲಕ್ಷ ಹಣದಲ್ಲಿ ಮನೆಯನ್ನು ನಿರ್ಮಿಸಿದ್ದಾನೆ. ಇದೆಲ್ಲಾ ನಡೆದ ಆರು ತಿಂಗಳ ಬಳಿಕ ಬ್ಯಾಂಕ್ ಅಧಿಕಾರಿಗಳು ರೈತನ ಖಾತೆಗೆ ತಪ್ಪಾಗಿ ಹಣ ವರ್ಗಾವಣೆ ಮಾಡಿರುವುದು ಅರಿತಿದ್ದಾರೆ.
ಕೂಡಲೇ ಆತನ ಸಂಪರ್ಕ ನಡೆಸಿ, ಖಾತೆಗೆ ತಪ್ಪಾಗಿ ದೊಡ್ಡ ಮೊತ್ತದ ಹಣ ಜಮೆ ಆಗಿದೆ, ಈ ಹಿನ್ನಲೆ ಪೂರ್ಣ ಮೊತ್ತವನ್ನು ಹಿಂದಿರುಗಿಸಬೇಕು ಎಂದು ಬ್ಯಾಂಕ್ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಈ ನೋಟಿಸ್ ನೋಡುತ್ತಿದ್ದಂತೆ ರೈತ ಶಾಕ್ ಆಗಿದ್ದಾನೆ .
ಅಭಿವೃದ್ಧಿ ಉದ್ದೇಶಗಳಿಗಾಗಿ ಪಿಂಪಲ್ವಾಡಿ ಗ್ರಾಮ ಪಂಚಾಯಿತಿಗೆ ಹಣವನ್ನು ಹಂಚಿಕೆ ಮಾಡಲಾಗಿತ್ತು ಆದರೆ ಬ್ಯಾಂಕ್ ಆಫ್ ಬರೋಡಾ ತಪ್ಪಾಗಿ ಜ್ಞಾನೇಶ್ವರ್ ಅವರ ಖಾತೆಗೆ ಮೊತ್ತವನ್ನು ಜಮಾ ಮಾಡಿ, ಈ ಎಡವಟ್ಟು ನಡೆಸಿದೆ.
ಬ್ಯಾಂಕ್ ಅಧಿಕಾರಿಗಳ ನೋಟಿಸ್ ಹಿನ್ನಲೆ ಇದೀಗ ರೈತ ಬ್ಯಾಂಕ್ಗೆ 15 ಲಕ್ಷ ಮೊತ್ತ ಹಿಂದಿರುಗಿಸಬೇಕಾಗಿದೆ. ಪ್ರಧಾನಿ ಮೋದಿ ಅವರು ತನ್ನ ಖಾತೆಗೆ ಹಣ ಜಮೆ ಮಾಡಿದ್ದಾರೆ ಎಂದು ನಾನು ಬಳಸಿದೆ. ಆದರೆ, ಇದೀಗ ಅಧಿಕಾರಿಗಳು ಇದು ತಪ್ಪಾಗಿ ಜಮೆಯಾದ ಮೊತ್ತ ಎಂದಿದ್ದಾರೆ. 15ರಲ್ಲಿ 6 ಲಕ್ಷ ರೂ ಅನ್ನು ಬ್ಯಾಂಕ್ಗೆ ನೀಡಲಾಗಿದ್ದು, ಇನ್ನು 9 ಲಕ್ಷ ಹಣವನ್ನು ಬ್ಯಾಂಕ್ ಆಫ್ ಬರೋಡಗೆ ಹಿಂದಿರುಗಿಸಬೇಕಾಗಿದೆ ಎಂದಿದ್ದಾರೆ.