ಕೇಸರಿ ಶಾಲು ಧರಿಸಿ ಹಾಸ್ಟೆಲ್ ಗೆ ಬಂದ ವಿದ್ಯಾರ್ಥಿ ಮೇಲೆ ಅನ್ಯಕೋಮಿನ ವಿದ್ಯಾರ್ಥಿಗಳಿಂದ ಮನಬಂದಂತೆ ಹಲ್ಲೆ!!! ಹಿಂದೂಪರ ಸಂಘಟನೆಗಳಿಂದ ವಿದ್ಯಾರ್ಥಿಯ ರಕ್ಷಣೆ
ಕೇಸರಿ ಶಾಲು ಧರಿಸಿದ್ದ ವಿದ್ಯಾರ್ಥಿಯೊಬ್ಬನ ಮೇಲೆ ಕುಶಾಲನಗರದ ಗುಮ್ಮನ ಕೊಲ್ಲಿಯಲ್ಲಿರುವ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಹಾಸ್ಟೆಲ್ ನಲ್ಲಿದ್ದ ಅನ್ಯಕೋಮಿನ ಯುವಕರು ಹಲ್ಲೆ ನಡೆಸಿದ್ದಾರೆ.
ಕುಶಾಲನಗರದ ಸರಕಾರಿ ಪಾಲಿಟೆಕ್ನಿಕ್ ವಿದ್ಯಾರ್ಥಿ ಅಂಥೋಣಿ ಪ್ರಜ್ವಲ್ ಹಲ್ಲೆಗೊಳಗಾದ ವಿದ್ಯಾರ್ಥಿ. ರಾಜಿಕ್ ಮತ್ತು ತಂಡದವರು ಕೇಸರಿ ಶಾಲು ಧರಿಸಿ ಹಾಸ್ಟೆಲ್ ಪ್ರವೇಶಿಸಿದ ಅಂಥೋಣಿಯನ್ನು ಪ್ರಶ್ನಿಸಿ ಅನಂತರ ರೂಮಿನ ಬಾಗಿಲು ಹಾಕಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಅನಂತರ ಅಂಥೋಣಿ ದೂರವಾಣಿ ಮೂಲಕ ಸ್ನೇಹಿತನಿಗೆ ವಿಷಯ ತಿಳಿಸಿ ಸಹಾಯ ಕೋರಿದ್ದಾನೆ. ಹಿಂದೂಪರ ಸಂಘಟನೆಗಳ ಪ್ರಮುಖರು ಹಲ್ಲೆಗೊಳಗಾದ ಅಂಥೋಣಿಯನ್ನು ರಕ್ಷಿಸಿದ್ದಾರೆ.
ರಾಜಿಕ್ ಎಂಬಾತನನ್ನು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಹಾಸ್ಟೆಲ್ ನ ಐವರು ವಿದ್ಯಾರ್ಥಿಗಳ ವಿರುದ್ಧ ಅಂತೋಣಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ.
ಹಾಸ್ಟೆಲ್ ಗೆ ಅತಿಕ್ರಮ ಪ್ರವೇಶ ಮಾಡಿದ ಐವರು ಸಂಘಟನೆ ಪ್ರಮುಖರ ವಿರುದ್ಧ ಕುಶಾಲನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.