ಹಿಜಾಬ್ ವಿವಾದ : ಸಹೋದರಿಯರಿಗೆ ಈ ಹೋರಾಟದಲ್ಲಿ ಯಶಸ್ಸು ಸಿಗಲಿ ಎಂದು ಹಾರೈಸಿದ ಓವೈಸಿ
ಕರ್ನಾಟಕದಲ್ಲೆಡೆ ಹಿಜಾಬ್ ವಿವಾದ ಹೆಚ್ಚಾಗುತ್ತಿದ್ದು, ಹಿಂಸಾಚಾರ ರೂಪ ಪಡೆದುಕೊಂಡಿದೆ. ಇದರ ನಡುವೆ ಆಲ್ ಇಂಡಿಯಾ AIMM ನಾಯಕ ಅಸಾದುದ್ದೀನ್ ಓವೈಸಿ ಸಹೋದರಿಯರು ಈ ಹೋರಾಟದಲ್ಲಿ ಯಶಸ್ವಿಯಾಗಲಿ ಎಂದು ಹೇಳಿದ್ದಾರೆ.
ಜನರು ತಮ್ಮ ದ್ವೇಷ ಸಾಧಿಸುವ ಮತ್ತು ಗುಂಡಿನ ದಾಳಿ ನಡೆಸುವವರ ವಿರುದ್ಧ ನಿಲ್ಲಬೇಕು ಎಂದು ಕರೆ ನೀಡಿದ್ದಾರೆ.
ಉತ್ತರಪ್ರದೇಶದಲ್ಲಿ ಸಾರ್ವಜನಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಓವೈಸಿ, ಗಡ್ಡ ಮತ್ತು ಟೋಪಿಯೊಂದಿಗೆ ಸಂಸತ್ತಿಗೆ ಹೋಗಬೇಕಾದರೆ, ಮುಸ್ಲಿಂ ಹುಡುಗಿಯರು ಹಿಜಾಬ್ ಅಥವಾ ನಿಖಾಬ್ ಧರಿಸಿ ಶಾಲೆಗೆ ಏಕೆ ಹೋಗಬಾರದು? ಎಂದು ಪ್ರಶ್ನಿಸಿದ್ದಾರೆ. ಹಿಜಾಬ್ ಧರಿಸುವ ಹಕ್ಕಿಗಾಗಿ ಹೋರಾಡುತ್ತಿರುವ ನಮ್ಮ ಸಹೋದರಿಯರು ತಮ್ಮ ಹೋರಾಟದಲ್ಲಿ ಯಶಸ್ವಿಯಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.