ಚಾರಣಕ್ಕೆಂದು ಹೋದ ಯುವಕರ ತಂಡ | ಬೆಟ್ಟದಿಂದ ಜಾರಿ ಬಿದ್ದ ಓರ್ವ ಯುವಕ| ಈತನ ರಕ್ಷಣೆ ಮಾಡಿದ ಕಥೆಯೇ ರೋಚಕ| ರಕ್ಷಣಾ ಕಾರ್ಯದ ಸಂಪೂರ್ಣ ಡೀಟೇಲ್ಸ್ ಇಲ್ಲಿದೆ

ಯುವಕರ ತಂಡವೊಂದು ಬೆಟ್ಟ ಏರೋಕೆ ಹೋಗಿ ಜೀವಕ್ಕೇ ಸಂಚಾಕಾರ ತಂದ ಘಟನೆಯೊಂದು ಕೇರಳ ರಾಜ್ಯದ ಪಾಲಕ್ಕಾಡ್ ಜಿಲ್ಲೆಯ ಮಲಪ್ಪುಳ ಪ್ರದೇಶದಲ್ಲಿ‌ ನಡೆದಿದೆ.

ಮಲಪ್ಪುಳ ಪ್ರದೇಶದಲ್ಲಿರುವ ಚೆರಾಡ್ ಬೆಟ್ಟವನ್ನು ಹತ್ತೋದಕ್ಕೆ ತೆರಳಿದ್ದಂತ ಮೂವರು ಯುವಕರ ತಂಡವೊಂದು ಮೇಲೇರಿದ್ದು, ಇಬ್ಬರಿಗೆ ಸಾಧ್ಯವಾಗದೇ ಕೆಳಗಿಳಿದಿದ್ದಾರೆ. ಒಬ್ಬ ಮಾತ್ರ ದೃಢ ನಿರ್ಧಾರದೊಂದಿಗೆ ಮೇಲೇರಿದ್ದಾನೆ. ಇನ್ನೇನು ತುದಿ ತಲುಪಬೇಕು ಎನ್ನುವಾಗಲೇ ಕಾಲು ಜಾರಿ ಕೆಳಗೆ ಬಿದ್ದು, ಪರ್ವತದ ತುದಿಯಲ್ಲಿನ ಬಂಡೆಗಳ ನಡುವೆ ಸಿಲುಕಿಕೊಂಡಿದ್ದಾನೆ. ಹೀಗೆ 2 ದಿನ ಅಲ್ಲೇ ಕಾಲ ಕಳೆದಿದ್ದಾನೆ ಯುವಕ. ಆದರೆ ಈತನನ್ನು ರಕ್ಷಿಸಿದ್ದು ಮಾತ್ರ ಕುತೂಹಲ.

ಕೇರಳದ ಪಾಲಕ್ಕಾಡ್ ನ ಮಲಂಪುಜಾ ಪರ್ವತಗಳ ಕುರುಂಬಚಿಯಲ್ಲಿ ಪ್ರಪಾತದ ತುದಿಯಿಂದ ಸುಮಾರು 30ಮೀ ದೂರದಲ್ಲಿ ಕಡಿದಾದ ಕಮರಿನಲ್ಲಿ ಸಿಕ್ಕಿಬಿದ್ದಿದ್ದ ಯುವಕನನ್ನು ಎರಡು ದಿನಗಳ‌ ರಕ್ಷಣಾ ಕಾರ್ಯಾಚರಣೆಯ ನಂತರ‌ ರಕ್ಷಿಸಲಾಗಿದೆ.

ಎಲಿಚಿರಾಮ್ ನಲ್ಲಿ ಬೆಟ್ಟದ ಸಣ್ಣ ಕುಳಿಯಿಂದ ಮಲಂಪುಳದಿಂದ ಚಾರಣಗಾರ ಬಾಬು ಅವರನ್ನು ರಕ್ಷಿಸಲು ತಮ್ಮ ಪ್ರಯತ್ನ ಪ್ರಾರಂಭಿಸಿದವು. ಕೇರಳ ಸಿಎಂ ಪಿನರಾಯ್ ವಿಜಯನ್ ನಂತರ ಭಾರತೀಯ ಸೇನೆಯ ಸಹಾಯವನ್ನು ಕೋರಿದರು. ನಂತರ, ಭಾರತೀಯ ಸೇನೆಯ ಎರಡು ತಂಡಗಳು ಬುಧವಾರ ಮುಂಜಾನೆ ಪಾಲಕ್ಕಾಡ್ ನಲ್ಲಿ ಕಾರ್ಯಾಚರಣೆ ಮಾಡಿದವು.

ಸೋಮವಾರ ಬಾಬು ಹಾಗೂ ಆತನ ಸ್ನೇಹಿತರು ಕುರುಂಬಚಿ ಬೆಟ್ಟದ ಕೆಳಗೆ ಚಾರಣ ಮಾಡಲು ಪ್ರಾರಂಭ ಮಾಡಿದರು. ಅನಂತರ ಅದು ಕಡಿದಾದ ಬೆಟ್ಟ ಎಂದು ತಿಳಿದಾಗ ಇಬ್ಬರು ಕೆಳಗಿಳಿದರು. ಬಾಬು ಮಾತ್ರ ಮೇಲಕ್ಕೇರಿದ‌. ಇನ್ನೇನು ತುದಿ ಮುಟ್ಟಬೇಕು ಎನ್ನುವಾಗ ಕಾಲು ಜಾರಿ ಬಿದ್ದು, ಕಣಿವೆಯಲ್ಲಿ ಸಿಲುಕಿಕೊಂಡಿದ್ದಾನೆ. ಮೊದಲಿಗೆ ಅವನ ಸ್ನೇಹಿತರು ಆತ ಎಲ್ಲಿದ್ದಾನೆಂದು ಗುರುತಿಸಿ ಸಹಾಯ ಮಾಡಲು ಮುಂದಾಗಿದ್ದಾರೆ. ನಂತರ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ನಂತರ ಕೇರಳ ಸರಕಾರ ಭಾರತೀಯ ಸೇನೆಗೆ ಮನವಿ ಮಾಡಿತು.

ಕೇರಳ ಅಗ್ನಿಶಾಮಕ ದಳ ಮತ್ತು ರಕ್ಷಣಾ ಇಲಾಖೆಯ ಸಹಾಯದಿಂದ ಪೊಲೀಸರು ರಾತ್ರಿ ಆತನನ್ನು ಗುರುತಿಸಿದೆ. ಫೋನ್ ಬಾಬು ಕೈಯಲ್ಲಿ ಇದ್ದುದ್ದರಿಂದ ಆತನ ಸಂಪರ್ಕ ಸಾಧ್ಯವಾಗಿದೆ.

ಆ ದಿನ ರಕ್ಷಣಾ ಕಾರ್ಯಾಚರಣೆ ಮಾಡಲು ಸಾಧ್ಯವಾಗಲಿಲ್ಲ. ಮಂಗಳವಾರ ರಕ್ಷಣಾ ಕಾರ್ಯ ಪ್ರಾರಂಭಿಸಲಾಯಿತು. ಬಾಬು ಮಾತ್ರ ಪ್ರಜ್ಞೆಯಲ್ಲೇ ಇದ್ದ. ರಕ್ಷಣಾ ಕಾರ್ಯಾಚರಣೆಯವರಿಗೆ ಪ್ರತಿಕ್ರಿಯಿಸುತ್ತಿದ್ದ.

ಆದರೂ ಕಡಿದಾದ ಇಳಿಜಾರು ಪ್ರದೇಶ ಅದು ಆಗಿರುವುದರಿಂದ ಹೆಲಿಕಾಪ್ಟರ್ ಬಾಬು ಹತ್ತಿರ ತಲುಪಲು ಸಾಧ್ಯವಾಗಲಿಲ್ಲ. ನಂತರ ಪರ್ವತಾರೋಹಣದಲ್ಲಿ ತರಬೇತಿ ಪಡೆದ ಭಾರತೀಯ ಸೇನಾ ಸಿಬ್ಬಂದಿಯ ತಂಡವನ್ನು ಸೇವೆಗೆ ಒತ್ತಾಯ ಮಾಡಲಾಯಿತು.

ಬುಧವಾರ ಮುಂಜಾನೆ 4 ಗಂಟೆಗೆ ಎರಡು ಸೇನಾ ತಂಡಗಳಿಂದ ಬಾಬು ಇರುವಂತ ಸ್ಥಳವನ್ನು ತಲುಪಿ ಕೊನೆಗೂ 2 ದಿನಗಳ ಸತತ ಕಾರ್ಯಾಚರಣೆ ನಂತರ ಬಾಬುವನ್ನು ರಕ್ಷಣೆ ಮಾಡಲಾಗಿದೆ.

Leave A Reply

Your email address will not be published.