ಹಿಜಾಬ್ ಧರಿಸಿದ ವಿದ್ಯಾರ್ಥಿನಿಯ ಬೆಂಬಲಿಸಿದ ಪ್ರತಾಪ್ ಸಿಂಹ ಟ್ವೀಟ್ ವೈರಲ್

ಬೆಂಗಳೂರು : ಸಂಸದ ಪ್ರತಾಪ್ ಸಿಂಹ ಅವರ ಅಳಿಸಲ್ಪಟ್ಟ ಟ್ವೀಟ್ ಒಂದು ವೈರಲ್ ಆಗಿದೆ.

 

ಮಂಡ್ಯ ನಗರದ ಪಿಇಎಸ್ ವಿಜ್ಞಾನ , ಕಲಾ ಮತ್ತು ವಾಣಿಜ್ಯ ಕಾಲೇಜಿನ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜು ಆವರಣದಲ್ಲಿ ಜೈ ಶ್ರೀರಾಂ ಘೋಷಣೆ ಕೂಗಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಗೆ ಸುತ್ತುವರಿಯಲು ಯತ್ನಿಸಿರುವ ಬಗ್ಗೆ ಪ್ರತಾಪ್ ಸಿಂಹ ವ್ಯಕ್ತಿಯೋರ್ವ ಮಾಡಿರುವ ಟ್ವೀಟನ್ನು ಶೇರ್ ಮಾಡಿ ಬಳಿಕ ಡಿಲೀಟ್ ಮಾಡಿದ್ದಾರೆ.

ಇಮ್ರಾನ್ ಖಾನ್ ಎಂಬುವವರ ಟ್ವೀಟನ್ನು ಸಂಸದ ಪ್ರತಾಪ್ ಸಿಂಹ ಅವರು ಹಂಚಿಕೊಂಡಿದ್ದು, ” ಇದು ಸರಿಯಲ್ಲ, ಈ ರೀತಿ ಯಾರೂ ಮಾಡಬೇಡಿ. ನಿಮಗೆ ಈ ಹುಡುಗಿಯನ್ನು ಕೆಣಕಲು ಯಾವುದೇ ಹಕ್ಕಿಲ್ಲ” ಎಂದು ರಿಟ್ವೀಟ್ ಮಾಡಿದ್ದಾರೆ ಎನ್ನಲಾಗಿದೆ.

ಆದರೆ ಈ ಟ್ವೀಟ್ ಡಿಲೀಟ್ ಆಗಿದೆ. ಆದರೆ ಇದರ ಸ್ಕ್ರೀನ್ ಶಾಟ್ ವೈರಲ್ ಆಗಿದೆ.

Leave A Reply

Your email address will not be published.