ಹಿಂಸಾತ್ಮಕ ರೂಪ ಪಡೆದ ಹಿಜಾಬ್-ಕೇಸರಿ ವಿವಾದ!! ಸ್ನೇಹಿತೆಗೆ ಬಲವಂತವಾಗಿ ಕೇಸರಿ ತೊಡಿಸಿದ ಎಂಬ ಕಾರಣಕ್ಕೆ ವಿದ್ಯಾರ್ಥಿಗೆ ಚೂರಿ ಇರಿತ
ಉಡುಪಿ ಜಿಲ್ಲೆಯಲ್ಲಿ ನಡೆಯುತ್ತಿರುವ ಹಿಜಾಬ್-ಕೇಸರಿ ವಿವಾದ ನೆರೆಯ ಕೊಡಗು ಜಿಲ್ಲೆಗೂ ಕಾಲಿಟ್ಟಿದ್ದು ಚೂರಿ ಇರಿತದ ಮೂಲಕ ಹಿಂಸಾತ್ಮಕ ರೂಪ ಪಡೆದುಕೊಂಡಿದೆ.
ಕೊಡಗು ಜಿಲ್ಲೆಯ ಕುಶಾಲನಗರದ ಸುಂದರನಗರದ ಕಾಲೇಜೊಂದರಲ್ಲಿ ಕೇಸರಿ ಧರಿಸಲು ಒತ್ತಾಯ ಮಾಡಿದ ಎಂಬ ಕಾರಣಕ್ಕೆ ಅಂತಿಮ ಪದವಿ ವಿದ್ಯಾರ್ಥಿಯ ಮೇಲೆ ಪ್ರಥಮ ಪದವಿ ವಿದ್ಯಾರ್ಥಿ ಚೂರಿ ಇರಿದಿದ್ದಾನೆ. ಘಟನೆಯಲ್ಲಿ ಇರಿತಕ್ಕೊಳಗಾದ ವಿದ್ಯಾರ್ಥಿಯನ್ನು ಅಂತಿಮ ಕಾಲ ವಿಭಾಗದ ಸಂಪತ್(20)ಎಂದು ಗುರುತಿಸಲಾಗಿದೆ.
ಘಟನೆ ವಿವರ:ಸಂದೀಪ್ ಕೇಸರಿ ಶಾಲು ಧರಿಸಿ ಪ್ರತಿಭಟನೆಗೆ ಮುಂದಾಗಿದ್ದು,ಈ ವೇಳೆ ಇತರ ವಿದ್ಯಾರ್ಥಿಗಳಿಗೂ ಶಾಲು ಹಂಚಿಕೆ ನಡೆದಿತ್ತು. ಹೀಗೆ ಶಾಲು ಹಂಚಿಕೊಂಡು ಚೂರಿ ಇರಿದ ವಿದ್ಯಾರ್ಥಿ ವಿಕ್ರಂ ಬಳಿಗೆ ಬಂದಾಗ ಆತ ಶಾಲು ಕೊಳ್ಳಲು ಹಿಂಜರಿದಿದ್ದಾನೆ, ಈ ಸಂದರ್ಭ ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿದೆ.
ಕೊನೆಗೆ ವಿಕ್ರಂ ಸಂದೀಪ್ ನ ಬೆನ್ನು ಹಾಗೂ ಭುಜಕ್ಕೆ ಚೂರಿಯಿಂದ ಇರಿದು ಗಾಯಗೊಳಿಸಿದ್ದು, ಸಂದೀಪ್ ನ ಸ್ನೇಹಿತರ ಮೇಲೂ ಹಲ್ಲೆಗೆ ಮುಂದಾಗಿದ್ದಾನೆ. ಸದ್ಯ ವಿಕ್ರಂ ಹಾಗೂ ಆತನ ಸ್ನೇಹಿತರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಈ ವೇಳೆ ತನ್ನ ಸ್ನೇಹಿತೆಗೆ ಬಲವಂತವಾಗಿ ಶಾಲು ಹೊದಿಸಲು ಸಂದೀಪ್ ಪ್ರಯತ್ನಿಸಿದಾಗ ಜಗಳ ನಡೆದಿದೆ ಎಂದು ವಿಕ್ರಂ ಪೊಲೀಸರ ಮುಂದೆ ಹೇಳಿದ್ದಾನೆ.