ಬೆಳ್ತಂಗಡಿ: ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಉಜಿರೆ ಘಟಕದ ಸತ್ಸಂಗ ಪ್ರಮುಖ್ ಹರೀಶ್ ಗುರಿಪಳ್ಳ ನಿಧನ

Share the Article

ಬೆಳ್ತಂಗಡಿ: ಬಣ್ ಕಲ್ ನಲ್ಲಿ ಅಪಘಾತಕ್ಕೀಡಾಗಿದ್ದ ಉಜಿರೆ ಘಟಕದ ಸತ್ಸಂಗ ಪ್ರಮುಖ್ ಹರೀಶ್ ಗುರಿಪಳ್ಳ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಇಹಲೋಕ ತ್ಯಜಿಸಿದ್ದಾರೆ.

ಜನವರಿ 22 ರಂದು ಬಣ್ ಕಲ್ ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಹರೀಶ್ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

Leave A Reply