ಸುಳ್ಯ:ಅನ್ಯಕೋಮಿನ ಜೋಡಿಯಿದ್ದ ಕಾರು ಪಲ್ಟಿ!! ನಿಲ್ಲಿಸಲು ಸೂಚನೆ ನೀಡಿದರೂ ಲೆಕ್ಕಿಸದೇ ಪರಾರಿಯಾಗಲು ಯತ್ನಿಸಿದಾಗ ನಡೆದ ಘಟನೆ

ಕೇರಳ ಕಡೆಯಿಂದ ಅತಿವೇಗವಾಗಿ ಬರುತ್ತಿದ್ದ ಮಡಿಕೇರಿ ಮೂಲದ ಅನ್ಯಕೋಮಿನ ಜೋಡಿಯಿದ್ದ ಕಾರೊಂದು ಸುಳ್ಯ ಸಮೀಪ ಪಲ್ಟಿಯಾದ ಘಟನೆ ಬೆಳಕಿಗೆ ಬಂದಿದ್ದು,ಜೋಡಿಯು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಜೋಡಿಯು ಕೇರಳದಿಂದ ಕೊಲ್ಚಾರು ಮಾರ್ಗವಾಗಿ ಬರುತ್ತಿದ್ದ ಮಾಹಿತಿ ಪಡೆದ ಹಿಂದೂ ಸಂಘಟನೆಗಳ ಕಾರ್ಯಕರ್ತರು ಕಾರನ್ನು ತಡೆಯಲು ಪ್ರಯತ್ನಿಸಿದಾಗ ಕಾರು ಚಾಲಕ ಕಾರನ್ನು ನಿಲ್ಲಿಸದೆ ಅತೀ ವೇಗವಾಗಿ ಚಲಾಯಿಸಿದ ಪರಿಣಾಮ ನಾಗಪಟ್ಟಣ ಗೆಸ್ಟ್ ಹೌಸ್ ಬಳಿ ನಿಯಂತ್ರಣ ತಪ್ಪಿ ಮಗುಚಿ ಬಿತ್ತು.

ಕೂಡಲೇ ಮಾಹಿತಿ ಪಡೆದ ಸುಳ್ಯ ಪೊಲೀಸರು ಸ್ಥಳಕ್ಕೆ ತೆರಳಿ ಜೋಡಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Leave A Reply

Your email address will not be published.