ಒಂದೇ ದಿನದಲ್ಲಿ ಬದಲಾಯಿತು ಆಕೆಯ ಅದೃಷ್ಟ !! | ಲಾಟರಿಯಲ್ಲಿ ಆಕೆ ಗೆದ್ದ ಬಹುಮಾನದ ಮೊತ್ತ ಎಷ್ಟು ಗೊತ್ತಾ??

Share the Article

ಕೆಲವರ ಅದೃಷ್ಟ ಹೇಗೆ ಬದಲಾಗುತ್ತದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಅಂತೆಯೇ ದುಬೈನಲ್ಲಿ ಕೇರಳದ ಯುವತಿಯೊಬ್ಬರಿಗೆ ಬಂಪರ್‌ ಲಾಟರಿ ಹೊಡೆದಿದ್ದು, ಲಾಟರಿ ಟಿಕೆಟ್‌ ಪಡೆದಿದ್ದ ಲೀನಾ ಜಲಾಲ್ ಎಂಬಾಕೆ 22 ಮಿಲಿಯನ್ ದಿರಂ ಅಂದರೆ ಬರೋಬ್ಬರಿ 44.75 ಕೋಟಿ ರೂಪಾಯಿಗಳನ್ನು ಗೆದ್ದಿದ್ದಾರೆ.

ಕೇರಳದ ಲೀನಾ ಜಲಾಲ್ ಅಬುದಾಬಿಯಲ್ಲಿ ಕಂಪೆನಿಯೊಂದರಲ್ಲಿ ಮಾನವ ಸಂಪನ್ಮೂಲ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದು, ಪ್ರತಿವಾರ ಡ್ರಾ ಮಾಡಲಾಗುವ ಟಿಕೆಟ್‌ನಲ್ಲಿ ಹಣ ಗೆದ್ದಿದ್ದಾರೆ. ತಮಗೆ ಬಂದಿರುವ ಹಣದಲ್ಲಿ ಹಲವು ಭಾಗವನ್ನು ಸಾಮಾಜಿಕ ಸೇವೆಗಾಗಿ ಮೀಸಲು ಇಡುವುದಾಗಿ ಲೀನಾ ಹೇಳಿಕೊಂಡಿರುವುದಾಗಿ ವರದಿಯಾಗಿದೆ.

ಇನ್ನು ಸೂರೈಫ್‌ ಸೂರು ಎಂಬ ಇನ್ನೊಬ್ಬ ಕೇರಳ ಮಲಪ್ಪುರಂನ ವ್ಯಕ್ತಿಗೆ 1 ಮಿಲಿಯನ್ ದಿರಂ ಮೊತ್ತ ಸಿಕ್ಕಿದ್ದು, ಇವರು ತಾವು ಗಳಿಸಿರುವ ಹಣದಲ್ಲಿ ಸ್ವಲ್ಪ ಹಣವನ್ನು ಪಾಲಕರಿಗೆ ನೀಡುವುದಾಗಿ ಹಾಗೂ ಉಳಿದಂತೆ ತನ್ನ ಪತ್ನಿ ಹಾಗೂ ಮಗಳ ಭವಿಷ್ಯದ ಭದ್ರತೆಗೆ ಹಣವನ್ನು ಬಳಸುತ್ತೇನೆ ಎಂದಿದ್ದಾರೆ.

Leave A Reply