ನೂಜಿಬಾಳ್ತಿಲ:ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಡಿಜಿಟಲ್ ಸೇವಾ ಕೇಂದ್ರ ಉದ್ಘಾಟನೆ!!ಹಲವು ಗಣ್ಯರು ಭಾಗಿ
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ವಲಯದ ನೂಜಿಬಾಳ್ತಿಲ ಉಮೇಶ್ ಶಾಯಿರಾಂ ರವರ ಕೊಠಡಿಯಲ್ಲಿ ನೂತನ ಸೇವಾಕೇಂದ್ರ ಕಛೇರಿ ಉಧ್ಘಾಟನೆ ಹಾಗೂ ಸಿ ಯಸ್ ಸಿ ಕೇಂದ್ರಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಅಧ್ಶಕ್ಷತೆ ವಹಿಸಿ ನೂತನ ಸೇವಾಕೇಂದ್ರವನ್ನು ಉಧ್ಘಾಟಿಸಿದ ನೂಜಿಬಾಳ್ತಿಲ ಗ್ರಾಮಪಂಚಾಯತ್ ಅಧ್ಶಕ್ಷರಾದ ಗಂಗಮ್ಮ ರವರು ಮಾತನಾಡಿ ನೂಜಿಬಾಳ್ತಿಲದ ಸುತ್ತಲಿನ ಸೂಮಾರು ಎರಡು ಸಾವಿರ ಕುಟುಂಬದವರಿಗೆ ಸರಕಾರದ ಸೌಲಭ್ಶಗಳ ಮಾಹಿತಿ ಹಾಗೂ ನೊಂದಾವಣೆ ಸೌಲಭ್ಶ ದ ಅಗತ್ಶತೆ ಇದ್ದು ಇದು ಪೂಜ್ಶ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಪ್ರಾರಂಭಗೊಂಡಿರುವ ಸಾಮಾನ್ಶ ಸೇವಾಕೇಂದ್ರ ದಿಂದ ಸಕಾರಗೊಂಡಿದೆ ಎಂದರು.
ಧರ್ಮಸ್ಥಳ ಯೋಜನೆಯ ದಕ್ಷಿಣ ಕನ್ನಡ ಜಿಲ್ಲಾ ನಿರ್ಧೇಶಕರು ಪ್ರವೀಣ್ ಕುಮಾರ್ ಸಿ ಯಸ್ ಸಿ ಕೇಂದ್ರವನ್ನು ದೀಪ ಬೆಳಗಿಸಿ ಉಧ್ಘಾಟಿಸಿ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃಧ್ಧಿಯೋಜನೆಯ ಹತ್ತುಹಲವು ಜನಪರ ಕಾರ್ಯಕ್ರಮದಲ್ಲಿ ಸಿ ಯಸ್ ಸಿ ಕೆಂದ್ರವೂ ಒಂದಾಗಿದೆ ಸರಕಾರದ ಹಲವು ಕಾರ್ಯಕ್ರಮಗಳ ಸೌಲಭ್ಶಗಳ ನೊಂದಾವಣೆ ಇಂದು ಪ್ರಾರಂಭಗೊಂಡಿರುವ ಸಾಮಾನ್ಶ ಸೇವಾ ಕೇಂದ್ರದಲ್ಲಿ ನೊಂದಾಯಿಸಲ್ಪಡುತ್ತದೆ ಇದರ ಪ್ರಯೋಜನವನ್ನು ನೂಜಿಬಾಳ್ತಿಲ ಗ್ರಾಮಪಂಚಾಯತ್ ವ್ಶಾಪ್ತಿಯಲ್ಲಿ ಎಲ್ಲರೂ ಪಡೆದುಕೊಳ್ಳುವಂತಾಗಲಿ ಎಂದು ಶುಭಹಾರೈಸಿದರು.ನೂಜಿಬಾಳ್ತಿಲ ಗ್ರಾಮಪಂಚಾಯತ್ ನ ಪ್ರಭಾರ ಅಭಿವೃಧ್ಧಿ ಅಧಿಕಾರಿ ಗುರುವ ಇಶ್ರಮ್ ಕಾರ್ಡ್ ನ್ನು ವಿತರಿಸಿ ಮಾತನಾಡಿದರು.
ಕಟ್ಟಡದ ಮಾಲಿಕರು ಹಾಗೂ ತೆಗ್ರ್ ತುಳು ಅಕೆಡಮಿಯ ಸಂಚಾಲಕರಾದ ಉಮೇಶ್ ಶಾಯಿರಾಂ ನೂಜಿಬಾಳ್ತಿಲ ಒಕ್ಕೂಟದ ಅಧ್ಶಕ್ಷರಾದ ಪುರುಶೋತ್ತಮ ಮಿತ್ತಂಡೇಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸೇವಾಪ್ರತಿನಿಧಿ ಸುಗುಣ ಸ್ವಾಗತಿಸಿ ಗೀತಾ ಧನ್ಶವಾದ ಮಾಡಿದರು. ಕಡಬ ತಾಲೂಕಿನ ಹಣಕಾಸು ಪ್ರಭಂಧಕಿ ಸುಜಾತ ಸಿ ಯಸ್ ಸಿ ತಾಲೂಕು ಸಂಚಾಲಕ ಚಿತ್ರೇಶ್ ˌ ಸಿ ಯಸ್ ಸಿ ಗ್ರಾಮ ನಿರ್ವಾಹಕಿ ಕುಮಾರಿ ಅಂಕಿತಾ ಮತ್ತುಒಕ್ಕೂಟದ ಪಧಾದಿಕಾರಿಗಳು ಸ್ವಸಹಾಯಸಂಘದ ಸದಸ್ಶರು ಉಪಸ್ಥಿತರಿದ್ದರು. ಕಡಬ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಕಾರ್ಯಕ್ರಮ ನಿರ್ವಹಿಸಿದರು.