ಮೂರನೆಯ ಅಲೆ ಮುಕ್ತಾಯದ ಹಂತದಲ್ಲಿ | ಕಳೆದೊಂದು ವಾರದಿಂದ ಸೋಂಕು ತೀವ್ರ ಇಳಿಮುಖ, ನಿರಾಳತೆಯತ್ತ ಮತ್ತೆ ಜನಸಮುದಾಯ!

ಬೆಂಗಳೂರು : ಇಡೀ ದೇಶದಲ್ಲಿ ಕೊರೊನಾ ತಾಂಡವಾಡುತ್ತಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿನ ಮೊದಲೆರಡು ಅಲೆಗಳಿಗಿಂತ ಮೂರನೇ ಅಲೆ ದುರ್ಬಲವಾಗಿದೆ. ಈ 3 ನೇ ಅಲೆಯ ಸೋಂಕು ಇನ್ನೆರಡು ವಾರಗಳಲ್ಲಿ ಬಹುತೇಕ ಮುಕ್ತಾಯಗೊಳ್ಳಲಿದೆ. ಕೋವಿಡ್ ಮೊದಲನೇ ಹಾಗೂ ಎರಡನೇ ಅಲೆಗಳು ಜನರನ್ನು ಬಿಟ್ಟು‌ಬಿಡದೆ ಕಾಡಿತ್ತು. ಈ ಬಗ್ಗೆ ಆರೋಗ್ಯ ಇಲಾಖೆಯ ಅನುಭವದ ಕೊರತೆ, ಹಾಗೂ ಲಸಿಕೆ ಪಡೆದವರ ಸಂಖ್ಯೆ ಕಡಿಮೆ ಇದ್ದ ಕಾರಣ ಸಾವು ನೋವಿನ ಪ್ರಮಾಣ ಅಧಿಕವಿತ್ತು. ಈ ಬಾರಿ 3 ನೇ ಅಲೆಯ ತೀವ್ರತೆ ಕಡಿಮೆ ಇದ್ದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿಲ್ಲ.

3 ನೇ ಅಲೆಯು ಜನವರಿಯಲ್ಲಿ ಹೆಚ್ಚಾಗಿದ್ದು, ಸರಾಸರಿ8 ಲಕ್ಷ ಪ್ರಕರಣಗಳು ವರದಿಯಾಗಿದ್ದವು.

ಸದ್ಯಕ್ಕೆ ರಾಜ್ಯದ 4-5 ಜಿಲ್ಲೆಗಳಲ್ಲಿ ಸೋಂಕು ಪ್ರಕರಣ 200 ಕ್ಕೂ ಅಧಿಕವಿದೆ. ಆದ್ದರಿಂದ ಮೂರನೇ ಅಲೆ ಮುಕ್ತಾಯವಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಇನ್ನೆರಡು ವಾರ ನಿಗಾ ವಹಿಸಲಾಗುತ್ತಿದೆ‌ ಜನರು ಸಮರ್ಪಕವಾಗಿ ಕೊರೊನಾ ನಿಯಮಗಳನ್ನು ಪಾಲಿಸದರೆ ಪ್ರಕರಣ ಇಳಿಕೆಯಾಗಲಿದೆ.ಆಗ ಮಾತ್ರ 3 ನೇ ಅಲೆ ಮುಕ್ತಾಯ ಆಗಿದೆ ಎಂಬುದಾಗಿ ಸ್ಪಷ್ಟ ಮಾಹಿತಿ ನೀಡಬಹುದು ಎಂದು ಆರೋಗ್ಯ ಇಲಾಖೆ ಆಯುಕ್ತ ಡಿ ರಂದೀಪ್ ಹೇಳಿದ್ದಾರೆ.

ಕೋವಿಡ್ ಮೂರನೇ ಅಲೆ ಇಳಿಮುಖ ಹಿನ್ನೆಲೆಯಲ್ಲಿ ವಿದೇಶದಿಂದ ಬಂದವರಲ್ಲಿ ಸೋಂಕು ದೃಢಪಟ್ಟವರಿಗೆ ಆಸ್ಪತ್ರೆ ಐಸೋಲೇಷನ್ ವಿನಾಯಿತಿ ಮತ್ತು ಮಹಾರಾಷ್ಟ್ರದಿಂದ ಆಗಮಿಸುವ ಪ್ರಯಾಣಿಕರಿಗೆ ಕೋವಿಡ್ ವರದಿಯಿಂದ ವಿನಾಯಿತಿ ನೀಡಲು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಸರಕಾರಕ್ಕೆ ಸಲಹೆ ನೀಡಿದ್ದಾರೆ. ಓಮಿಕ್ರಾನ್ ಹರಡುವಿಕೆ ನಿಯಂತ್ರಿಸುವ ಸಲುವಾಗಿ‌‌ ನವೆಂಬರ್ ಕೊನೇ ವಾರದಿಂದ ವಿದೇಶದಿಂದ ಆಗಮಿಸಿದವರಲ್ಲಿ ಸೋಂಕು ದೃಢಪಟ್ಟವರು 7 ದಿನ ಆಸ್ಪತ್ರೆ ಐಸೋಲೇಶನ್ ಕಡ್ಡಾಯಗೊಳಿಸಲಾಗಿತ್ತು. ನಂತರ ಸೋಂಕು ತೀವ್ರವಾಗಿಲ್ಲವಾದ್ದರಿಂದ ವಿದೇಶದಿಂದ ಬಂದವರಲ್ಲಿ ಸೋಂಕು ದೃಢಪಟ್ಟರೂ ರೋಗ ಲಕ್ಷಣ ಇಲ್ಲದಿದ್ದರೆ ಆಸ್ಪತ್ರೆ ವಾಸದ ಬದಲಿಗೆ ಮಾದರಿಯನ್ನು ಜಿನೋಮಿ ಸೀಕ್ವೆನ್ಸಿಂಗ್ ಪರೀಕ್ಷೆಗೆ ಕಳುಹಿಸಿ ಮನೆ ಆರೈಕೆಗೆ ಸೂಚಿಸಲಾಗಿತ್ತು.

ಮಹಾರಾಷ್ಟ್ರ, ಕೇರಳ ಹಾಗೂ ಗೋವಾದಿಂದ ರಾಜ್ಯಕ್ಕೆ ಆಗಮಿಸುವ ಪ್ರಯಾಣಿಕರಿಗೆ ನೆಗೆಟಿವ್ ವರದಿ ಕಡ್ಡಾಯ ಮಾಡಲಾಗಿದೆ. ಕೇರಳ ಮತ್ತು ಗೋವಾದಲ್ಲಿ ಸೋಂಕಿನ ತೀವ್ರತೆ ಹೆಚ್ಚಿರುವುದರಿಂದ ಎರಡೂ ರಾಜ್ಯಗಳಿಗೆ ವರದಿ ಕಡ್ಡಾಯ ಮಾಡಲಾಗಿದೆ‌. ಮಹಾರಾಷ್ಟ್ರದಲ್ಲಿ ಸೋಂಕು ಇಳಿಮುಖವಾಗಿರುವುದರಿಂದ ಪ್ರಯಾಣಿಕರಿಗೆ ವರದಿಯಿಂದ ವಿನಾಯ್ತಿ ನೀಡಬಹುದು.ಸದ್ಯಕ್ಕೆ ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆ ಬಹುತೇಕ ನಿಯಂತ್ರಣಕ್ಕೆ ಬಂದಿದ್ದು, ಕಳೆದೊಂದು ವಾರದಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ಎರಡು ಪಟ್ಟು ಇಳಿಕೆಯಾಗಿದೆ.

Leave A Reply

Your email address will not be published.