ಬಂಟ್ವಾಳ: ಕಾರು ಹಾಗೂ ಆಟೋ ನಡುವೆ ಡಿಕ್ಕಿ!! ಅಪಘಾತದ ತೀವ್ರತೆಗೆ ರಸ್ತೆಗೆ ಎಸೆಯಲ್ಪಟ್ಟ ಮಹಿಳೆ ಮೃತ್ಯು-ಆಟೋ ಚಾಲಕನಿಗೆ ಗಾಯ

Share the Article

ಬಂಟ್ವಾಳ: ಇಲ್ಲಿನ ಅಮ್ಟೂರು ಸಮೀಪ ಕಾರು ಹಾಗೂ ಆಟೋ ರಿಕ್ಷಾ ನಡುವೆ ಡಿಕ್ಕಿ ಸಂಭವಿಸಿ ಮಹಿಳೆಯೊಬ್ಬರು ಮೃತಪಟ್ಟು, ಆಟೋ ಚಾಲಕ ಗಾಯಗೊಂಡ ಘಟನೆಯ ಬಗ್ಗೆ ವರದಿಯಾಗಿದೆ. ಮೃತ ಮಹಿಳೆಯನ್ನು ಕಲ್ಲಡ್ಕ ಮುರಬೈಲು ನಿವಾಸಿ ದೇವಕಿ ಎಂದು ಗುರುತಿಸಲಾಗಿದೆ.

ಅಪಘಾತದ ತೀವ್ರತೆಗೆ ಆಟೋ ದಲ್ಲಿದ್ದ ಮಹಿಳೆ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡ ಪರಿಣಾಮ ದಾರುಣವಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.ಗಾಯಳುವನ್ನು ಆಟೋ ಚಾಲಕ ಭೋಜ ಮೂಲ್ಯ ಎಂದು ಗುರುತಿಸಲಾಗಿದ್ದು, ಕಾರಿನ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದು, ಘಟನೆಯಿಂದ ಎರಡೂ ವಾಹನಗಳು ಜಖಂಗೊಂಡಿದೆ.

Leave A Reply