ವಸತಿ ಶಾಲೆಗಳ ಪ್ರವೇಶಾತಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಅರ್ಜಿ ಆಹ್ವಾನ|ಅರ್ಜಿ ಸಲ್ಲಿಸಲು ಕೊನೆಯ ದಿನ ಫೆ.22

Share the Article

ಸಮಾಜ ಕಲ್ಯಾಣ ಇಲಾಖೆಯು 2022-23 ನೇ ಸಾಲಿಗೆ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಡಾ.ಬಿ.ಆರ್. ಅಂಬೇಡ್ಕರ್, ಇಂದಿರಾ ಗಾಂಧಿ ಹಾಗೂ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗಳಿಗೆ 6 ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಿದೆ.

ಅರ್ಜಿ ಸಲ್ಲಿಸಲು ಫೆಬ್ರವರಿ 22 ಕೊನೆಯ ದಿನವಾಗಿದೆ.

ಮಗುವಿನ SATS NUMBER, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ ಕಾರ್ಡ, ಪಡಿತರ ಚೀಟಿಯ ಜೆರಾಕ್ಸ್ ಹಾಗೂ ಮಗುವಿನ ಇತ್ತೀಚಿನ ಭಾವಚಿತ್ರ ದಾಖಲೆಗಳೊಂದಿಗೆ ಹತ್ತಿರದ ವಸತಿ ಶಾಲೆಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಇಲಾಖಾ ವೆಬ್‍ಸೈಟ್ http://kea.kar.nic.in, http://kreis.kar.nic.in ಅಥವಾ ದೂರವಾಣಿ ಸಂಖ್ಯೆ 0836-2447201 ಸಂಪರ್ಕಿಸಬಹುದು ಎಂದು ಧಾರವಾಡ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

Leave A Reply