ಮಂಗಳೂರು:ಉಡುಪಿಯ ಹಿಜಾಬ್ ವಿವಾದದ ಹಿನ್ನೆಲೆ-ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಿಗೆ ಕೊಲೆ ಬೆದರಿಕೆ!! ರಹೀಮ್ ಉಚ್ಚಿಲ ಗೆ ಮೊಬೈಲ್ ಕರೆಗಳಿಂದ ಬೆದರಿಕೆ-ಪೊಲೀಸರಿಗೆ ದೂರು

ರಾಜ್ಯಾದ್ಯಂತ ಭಾರೀ ವಿವಾದಕ್ಕೆ ಕಾರಣವಾಗಿ, ಚರ್ಚಾ ಭಾಗವಾಗಿ ಸುದ್ದಿಯಲ್ಲಿರುವ ಉಡುಪಿ ಜಿಲ್ಲೆಯ ಕಾಲೇಜೊಂದರ ವಿದ್ಯಾರ್ಥಿನಿಗಳ ಹಿಜಾಬ್ ವಿವಾದ ಕುರಿತು ಸರ್ಕಾರ ಕೊಟ್ಟ ನಿಲುವಿಗೆ ಸಮರ್ಥನೆ ವ್ಯಕ್ತಪಡಿಸಿದ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ, ಬಿಜೆಪಿ ಮುಖಂಡ ರಹೀಮ್ ಉಚ್ಚಿಲ ರಿಗೆ ಬೆದರಿಕೆ ಕರೆಗಳು ಬರಲಾರಭಿಸಿದೆ.

 

ರಹೀಮ್ ಉಚ್ಚಿಲ ಅವರಿಗೆ ಮೊಬೈಲ್ ಕರೆಗಳ ಮೂಲಕ ಹಲವು ಕಡೆಗಳಿಂದ ಬೆದರಿಕೆ ಕರೆಗಳು ಬರುತ್ತಿರುವ ಬಗ್ಗೆ ಮಂಗಳೂರು ದಕ್ಷಿಣ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ರಹೀಮ್, ಹಿಜಾಬ್ ವಿವಾದಕ್ಕೆ ಸಮ್ಮತಿಸಲಿಲ್ಲ ಎಂಬ ಕಾರಣಕ್ಕೆ ಕಿಡಿಗೇಡಿಗಳು ಬೆದರಿಕೆ ಒಡ್ಡಿದ್ದು, ಈ ಬಗ್ಗೆ ಈಗಾಗಲೇ ಕೇಸ್ ದಾಖಲು ಮಾಡಲಾಗಿದ್ದು, ಇಂತಹ ಬೆದರಿಕೆಗಳಿಗೆ ಬೆದರುವುದಿಲ್ಲ ಎಂದಿದ್ದಾರೆ. ಸದ್ಯ ಪೊಲೀಸರು ಮೊಬೈಲ್ ಸಂಖ್ಯೆಯ ಜಾಡನ್ನು ಬೆನ್ನು ಹತ್ತಿ ತನಿಖೆ ಮುಂದುವರಿಸಿದ್ದಾರೆ.

Leave A Reply

Your email address will not be published.