ಫುಡ್ ಆರ್ಡರ್ ಮೊದಲೇ ನೋಡಬಹುದು ರುಚಿ…!!! ಟಿವಿ ಸ್ಕ್ರೀನ್ ನೆಕ್ಕಿಯೇ ಫುಡ್ ಟೇಸ್ಟ್ ಮಾಡಬಹುದು! ಜಪಾನ್ ನ ಹೊಸ ತಂತ್ರಜ್ಞಾನ
ಟಿವಿ ಎಂದಾಕ್ಷಣ ನೆನಪಾಗುವುದು ಅದರ ರಿಮೋಟ್ ವೆರೈಟಿ ವೆರೈಟಿ ಚಾನೆಲ್ ಗಳು. ಹಾಗೆನೇ ಇತ್ತೀಚೆಗೆ ಹಲವಾರು ವಿವಿಧ ಟಿವಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಆದರೆ ಈ ಟಿವಿ ಇದೆಯಲ್ಲ ಇದರಲ್ಲಿ ಯಾವುದೇ ಚಾನೆಲ್ ಬರುವುದಿಲ್ಲ. ಆದರೆ ಈ ಟಿವಿಯಲ್ಲಿ ಬರುವುದು ವಿಧವಿಧವಾದ ಫುಡ್ ಐಟಮ್ ಗಳು. ಈ ಆಹಾರಗಳ ಫುಡ್ ನ್ನು ಟಿವಿ ಸ್ಕ್ರೀನ್ ಮೇಲೆ ನೆಕ್ಕಿದರೆ ಸಾಕು ನಿಮಗೆ ರುಚಿ ಗೊತ್ತಾಗುತ್ತದೆ. ಈ ಟಿವಿಯ ಆವಿಷ್ಕಾರ ಜಪಾನ್ ನಲ್ಲಿ ಆಗಿದೆ. ಬಹುಶಃ ಮುಂದಿನ ದಿನಗಳಲ್ಲಿ ಇದು ಕಾರ್ಯರೂಪಕ್ಕೆ ಬರುವ ಎಲ್ಲಾ ಸಾಧ್ಯತೆ ಇದೆ. ಪರದೆಯ ಮೇಲಿನಿಂದ ರುಚಿಯನ್ನು ತೋರಿಸುವ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದೆ. ಹೌದು ಇದನ್ನ ಟೇಸ್ಟ್ ಟಿವಿ ಅಥವಾ ಟಿಟಿಟಿ (ಟೇಸ್ಟ್ ದಿ ಟಿವಿ) ಟಿವಿ ಎಂದು ಕರೆಯಲಾಗುತ್ತದೆ.
ಈವರೆಗೆ ಪರದೆಗಳಿಂದ ಆಹಾರ ಪದಾರ್ಥಗಳನ್ನು ಆರ್ಡರ್ ಮಾಡುವುದನ್ನು ಮಾತ್ರ ಮಾಡುತ್ತಿದ್ದವರು ಇನ್ನು ಮುಂದೆ ಟಿವಿ ಪರದೆ ನೆಕ್ಕಿ ರುಚಿ ನೋಡಿ ಫುಡ್ ಆರ್ಡರ್ ಮಾಡಬಹುದು.
ಟೋಕಿಯೋದ ಮೆಯಿಜಿ ವಿಶ್ವವಿದ್ಯಾನಿಲಯದ ಫ್ರೊಫೆಸರ್ ಹೋಮಿ ಮಿಯಶಿತಾ ಈ ಫ್ರೋಟೋಟೈಪ್ ಟಿವಿಯನ್ನು ನಿರ್ಮಿಸಿದ್ದಾರೆ.