ಸಂಬಳಕ್ಕಾಗಿ ದುಡಿಯುವ ಕಾಗೆಗಳು !!! ಸೇದಿ ಬಿಸಾಡಿದ ಸಿಗರೇಟ್ ಸಂಗ್ರಹಿಸುವುದೇ ಇವುಗಳ ಕೆಲಸ! ಅಷ್ಟಕ್ಕೂ ಇವುಗಳಿಗೆ ಸಂಬಳ ಎಷ್ಟು?

ಮೊದಲಿಗೆ ಮನುಷ್ಯ ಮಾತ್ರ ಕೆಲಸ ಮಾಡುತ್ತಿದ್ದ. ಅನಂತರ ಆತ ತನ್ನ ಉಪಯೋಗಕ್ಕಾಗಿ ಯಂತ್ರಗಳನ್ನು ಕಂಡು ಹಿಡುಕಿದ. ತದನಂತರ ಪ್ರಾಣಿಗಳಿಗೆ ಕೆಲಸ ಮಾಡಲು ಕಲಿಸಿದ. ನಾಯಿ, ಬೆಕ್ಕುಗಳ‌ಂಥ ಸಾಕು ಪ್ರಾಣಿಗಳು ತಮ್ಮ ಮಾಲೀಕನ ಕೆಲಸಗಳನ್ನು ಮಾಡಿಕೊಡುತ್ತಿರುವುದು ಕೂಡಾ ಹೊಸದೇನಲ್ಲ‌. ಆದರೆ ಕುತೂಹಲಕಾರಿ ವಿಷಯ ಏನೆಂದರೆ ಕಾಗೆಗಳು ಸಂಬಳಕ್ಕಾಗಿ ಮನುಷ್ಯನಿಗೆ ಕೆಲಸ‌ ಮಾಡಿಕೊಡುತ್ತದೆ ಎನ್ನುವುದು.

ಇದು ಹೇಗೆ ಸಾಧ್ಯ ಅಂತೀರಾ ? ಇಂಥದ್ದೊಂದು ಅಚ್ಚರಿಯ ಘಟನೆ ನಡೆಯುತ್ತಿರುವುದು ಸ್ಪೀಡನ್ ನಲ್ಲಿ. ಅಷ್ಟಕ್ಕೂ ಇವುಗಳು ಮಾಡುವ ಕೆಲಸ ಏನೆಂದರೆ, ಸ್ಪೀಡಿಶ್ ‌ನಗರದ ಬೀದಿಗಳಲ್ಲಿ ಸೇದಿ ಬಿಸಾಡಿದ ಸಿಗರೇಟನ್ನು ಸಂಗ್ರಹಿಸುವುದು. ಮೊದ ಮೊದಲು ಒಂದೆರಡು ಕಾಗೆಗಳು ಮಾಡುತ್ತಿದ್ದವು. ಅನಂತರ ಈಗ ತರಬೇತಿ ನೀಡಲಾಗುತ್ತಿದೆ. ಈಗ ಹಲವು ಕಾಗೆಗಳು ಬಂದಿದ್ದು, ಎಲ್ಲದ್ದಕ್ಕೂ ತರಬೇತಿ ನೀಡಲಾಗುತ್ತಿದೆ. ಯಾವುದೇ ಕಾಗೆಯನ್ನು ಈ ಕೆಲಸಕ್ಕಾಗಿ ಬಲವಂತ ಮಾಡಿಲ್ಲ. ಅವುಗಳೇ ಸ್ವಯಂ ಪ್ರೇರಿತವಾಗಿ ಕೆಲಸಕ್ಕೆ ಸೇರಿಕೊಂಡಿದೆ ಎನ್ನುತ್ತಾರೆ ಇಲ್ಲಿಯ ಮಂದಿ.

ಸ್ಟಾರ್ಟ್ ಆಪ್ ಮೂಲಕ ಒಂದು ಯಂತ್ರವನ್ನು ಈ ಕಾಗೆಗಳಿಗಾಗಿಯೇ ತಯಾರು ಮಾಡಲಾಗಿದೆ. ಇದರಲ್ಲಿ ಕಾಗೆಗಳಿಗೆ ಇಷ್ಟವಾಗುವ ಆಹಾರ ಇಡಲಾಗಿದೆ. ಈ ಯಂತ್ರದೊಳಗೆ ಕಾಗೆ ತಾನು ತಂದಿರುವ ಸಿಗರೇಟ್ ತುಂಡನ್ನು ಹಾಕಿದರೆ, ಅತ್ತ ಕಡೆಯಿಂದ ಆಹಾರ ಬರುತ್ತದೆ. ಕಾಗೆ ಎಷ್ಟು ಸಿಗರೇಟಿನ ತುಂಡು ತರುತ್ತದೆಯೋ ಅಷ್ಟು ಆಹಾರ ಇವುಗಳಿಗೆ ದೊರೆಯುತ್ತದೆ. ಇದೇ ಅವುಗಳಿಗೆ ಸಂಬಳ.

ರಾಜಧಾನಿ ಸ್ಟಾಕ್ ಹೋಂ‌ನ ಸಮೀಪದಲ್ಲಿ ಇರುವ ಸೋಡರ್ಟೆಲಿಯಾ ನೈರುತ್ಯ ಭಾಗದಲ್ಲಿ ಈ ಯಂತ್ರವನ್ನು ಇಡಲಾಗಿದೆ. ಅಲ್ಲಿ ಈ ಕಾಗೆಗಳು ಬಂದು ತಾವು ಕಲೆಕ್ಟ್ ಮಾಡಿದ ಸಿಗರೇಟ್ ತುಂಡನ್ನು ಹಾಕುತ್ತದೆ. ಅನೇಕ ಕಾಗೆಗಳು ಈ ರೀತಿ ಮಾಡಿತ್ತದೆ. ಆಹಾರ ಸಿಗುತ್ತದೆ ಎನ್ನುವ ಕಾರಣಕ್ಕೆ ತುಂಬಾ ಕಾಗೆಗಳು ಸಿಗರೇಟು ಹುಡುಕಿ ತರುತ್ತವೆ.

ಈ ದೇಶದ ಬೀದಿಗಳಲ್ಲಿ ಒಂದು ಬಿಲಿಯನ್ ಸಿಗರೇಟ್ ತುಂಡುಗಳನ್ನು ಬಿಸಾಡಲಾಗುತ್ತದೆ. ಪ್ರತಿಯೊಂದನ್ನು ಹುಡುಕಲು ಲಕ್ಷಾಂತರ ರೂಪಾಯಿ ಖರ್ಚಾಗುತ್ತುತ್ತು. ಇದೀಗ ಈ ಕೆಲಸವನ್ನು ಕಾಗೆಗಳೇ ಮಾಡುತ್ತಿದೆ. ಇಷ್ಟಕ್ಕೂ ಕಾಗೆಗಳು ಮಾತ್ರವಲ್ಲ ಕಾಗೆಗಳ ಪ್ರಭೇದಕ್ಕೆ ಸೇರಿದ ರೂಕ್ಸ್ ಗಳು, ಜ್ಯಾಕ್ ಡಾವ್ ಗಳು ಮತ್ತು ಮ್ಯಾಗ್ ಪೈಗಳು ಇವುಗಳು ಕೂಡಾ ಈ ಕೆಲಸ ಮಾಡುತ್ತದೆಯಂತೆ. ಮನುಷ್ಯ ತನ್ನ ಕೆಲಸ ಸುಲಭ ಮಾಡಲು ಏನೆಲ್ಲಾ ತಂತ್ರಜ್ಞಾನ ಬಳಸುತ್ತಾನೆ ಅನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆ.

Leave A Reply

Your email address will not be published.