NEET PG ಪರೀಕ್ಷೆ ಮುಂದೂಡಿಕೆ | 6 ರಿಂದ 8 ವಾರ ಪರೀಕ್ಷೆ ಮುಂದಕ್ಕೆ

Share the Article

ನವದೆಹಲಿ : ಮಾರ್ಚ್ 2022 ರ ಮಾರ್ಚ್ 12 ರಂದು ನಡೆಯಬೇಕಿದ್ದ ನೀಟ್ ಪಿಜಿ ಪರೀಕ್ಷೆ ಮುಂದೂಡಲಾಗಿದೆ.

ಕೇಂದ್ರ ಆರೋಗ್ಯ ಸಚಿವಾಲಯ ಈ ಬಗ್ಗೆ ಟ್ವೀಟ್ ಮಾಡಿದೆ. ಮಾರ್ಚ್ 12 ರಂದು ನಡೆಯಬೇಕಿದ್ದ ನೀಟ್ ಪಿಜಿ ಪರೀಕ್ಷೆ 6 ರಿಂದ 8 ವಾರಗಳವರೆಗೆ ಮುಂದೂಡಲಾಗಿದೆ. ನೀಟ್ ಪಿಜಿ 2021 ಕೌನ್ಸಿಲಿಂಗ್ ಇರುವ ಕಾರಣ ಪರೀಕ್ಷೆಯನ್ನು ಮುಂದೂಡಲಾಗಿದೆ. ಶೀಘ್ರವೇ ಪರೀಕ್ಷೆಯ ದಿನಾಂಕವನ್ನು ಪ್ರಕಟಿಸಲಾಗುವುದು.

ನೀಟ್ ಪಿಜಿ 2022 ಗೆ ರಿಜಿಸ್ಟ್ರೇಶನ್ ಪಡೆಯಲು ಫೆ.04, 2022 ರವರೆಗೆ ಅವಕಾಶ ‌ನೀಡಲಾಗಿತ್ತು. ಎನ್ ಬಿಇ ಹೊರಡಿಸುವ ಇತರೆ ನೋಟಿಸ್ ಗಳ ಮೇಲೂ ವಿದ್ಯಾರ್ಥಿಗಳು ಗಮನಹರಿಸಬೇಕಾಗಿದೆ. ಮುಂದಿನ ನೀಟ್ ಪಿಜಿ 2022 ಪರೀಕ್ಷೇ ವೇಳಾಪಟ್ಟಿಯನ್ನು ಎನ್ ಬಿಇ ಅಪ್ಡೇಟ್‌ ಮಾಡಲಿದೆ.

Leave A Reply