ರಾಜ್ಯದ ಸ್ವ ಸಹಾಯ ಸಂಘಗಳ ಮಹಿಳಾ ಕಾರ್ಮಿಕರಿಗೆ ಸಿಹಿ ಸುದ್ದಿ : ಸರಕಾರ – ಅಮೆಜಾನ್ ನಡುವೆ ಉತ್ಪನ್ನಗಳ ಮಾರಾಟಕ್ಕೆ ಒಪ್ಪಂದ

ಬೆಂಗಳೂರು : ಸ್ವಸಹಾಯ ಸಂಘಗಳ ಮಹಿಳಾ ಕಾರ್ಮಿಕರಿಗೆ ರಾಜ್ಯ ಸರಕಾರ ಗುಡ್ ನ್ಯೂಸೊಂದನ್ನು ನೀಡಿದೆ. ಅವರ ಉತ್ಪನ್ನಗಳಿಗೆ ಡಿಜಿಟಲ್ ವೇದಿಕೆ ಕಲ್ಪಿಸಿ‌ ಕೊಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ಹಾಗೂ ಆನ್ಲೈನ್ ಶಾಪಿಂಗ್ ತಾಣ ಅಮೆಜಾನ್ ಸಂಸ್ಥೆ ಪರಸ್ಪರ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ.

ಅಮೆಜಾನ್ ತನ್ನ ಮಾರುಕಟ್ಟೆಯಲ್ಲಿ ಎಸ್ ಹೆಚ್ ಜಿ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತದೆ‌ ಹಾಗೂ ಕರ್ನಾಟಕದ ರಾಜ್ಯದ ಸಾವಿರಾರು ಮಹಿಳಾ ಉದ್ಯಮಿಗಳಿಗೆ ಆನ್ಲೈನ್ ಗೆ ಬರಲು ಮತ್ತು ಅವರ ಉತ್ಪನ್ನಗಳಿಗೆ ವ್ಯಾಪಕ ಮಾರುಕಟ್ಟೆಯನ್ನು ಪ್ರವೇಶಿಸಲು ತರಬೇತಿ ನೀಡಲು ಮತ್ತು ಸಬಲೀಕರಣಗೊಳಿಸಲು ತನ್ನ ‘ ಸಹೇಲಿ’ ಕಾರ್ಯಕ್ರಮದ ಪ್ರಯೋಜನಗಳನ್ನು ವಿಸ್ತರಿಸುತ್ತದೆ.

ಈ ಬಗ್ಗೆ ಸಿ ಎಂ ಬಸವರಾಜ ಬೊಮ್ಮಾಯಿಯವರು ಕೂಡ ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿದ್ದಾರೆ. ಲಕ್ಷಾಂತರ ಮಹಿಳೆಯರ ಸಬಲೀಕರಣ ಜೊತೆಗೆ 2 ಲಕ್ಷಕ್ಕೂ ಅಧಿಕ ಸ್ವಸಹಾಯ ಸಂಘಗಳು ನೆರವಾಗುವ ಜೊತೆ ಆರ್ಥಿಕತೆಗೆ ಅಪಾರವಾದ ಕೊಡುಗೆ ನೀಡಲು ಸಹಾಯ ಮಾಡುತ್ತದೆ ಎಂದು ಟ್ವಿಟ್ಟರ್ ನಲ್ಲಿ ಹೇಳಿದ್ದಾರೆ.

ರಾಜ್ಯದ ಮಹಿಳಾ ಸ್ವಸಹಾಯ ಸಂಘಗಳ ಉತ್ಪನ್ನಗಳನ್ನು ಡಿಜಿಟಲ್ ವೇದಿಕೆಯಲ್ಲಿ ಮಾರಾಟ ಮಾಡಲು ಮುಖ್ಯಮಂತ್ರಿ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಸಂಜೀವಿನಿ – ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸಂಘದ ಸದಸ್ಯರು ಮತ್ತು ಅಮೆಜಾನ್ ನಡುವೆ ಒಪ್ಪಂದಕ್ಕೆ ಸಹಿ ಮಾಡಲಾಯಿತು.

Leave A Reply

Your email address will not be published.