ಕೆಲಸದ ಸಂದರ್ಶನಕ್ಕೆಂದು ಬಂದ ಗರ್ಭಿಣಿ ಯುವತಿ ಸಾವು|ಯಂತ್ರಕ್ಕೆ ಕೂದಲು ಸಿಲುಕಿ‌ ದಾರುಣ ಮೃತ್ಯು!!!

Share the Article

ಉದ್ಯೋಗದ ಸಂದರ್ಶ‌ನಕ್ಕೆಂದು ಬಂದ ಗರ್ಭಿಣಿ ಯುವತಿಯೊಬ್ಬಳು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ.

ಈ ಘಟನೆ ರಷ್ಯದ ಬೆಲಾರಸ್ ನ ಬೊರಿಸೊವ್ ನಲ್ಲಿ ನಡೆದಿದೆ‌ ಮೃತ ಯುವತಿಯನ್ನು ಏಳು ವಾರದ ಗರ್ಭಿಣಿಯಾಗಿದ್ದ ಊಮಿದಾ ನಜರೋವಾ ( 21) ಎಂದು ಗುರುತಿಸಲಾಗಿದೆ.

ಸ್ಟರ್ಮೆಟ್ ವೆಲ್ಡಿಂಗ್ ವೈರ್ ಮತ್ತು ಇಲೆಕ್ಟ್ರಾನಿಕ್ ಉತ್ಪನ್ನದ ಕಾರ್ಖಾನೆಯಲ್ಲಿ ಉದ್ಯೋಗ ಸಂದರ್ಶನಕ್ಕೆಂದು ತೆರಳಿದಾಗ ಕಾರ್ಖಾನೆಯ ಯಂತ್ರಕ್ಕೆ ಆಕೆಯ ಕೂದಲು ಸಿಲುಕಿಕೊಂಡು ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.

ಕಾರ್ಖಾನೆಯ ಹಿರಿಯ ಸಿಬ್ಬಂದಿಯೋರ್ವರು ಆಕೆಗೆ ಕಾರ್ಖಾನೆಯ ಸೌಲಭ್ಯ ಹಾಗೂ ಕಾರ್ಯನಿರ್ವಹಣೆಯ ಬಗ್ಗೆ ತೋರಿಸುತ್ತಿದ್ದಾಗ ಉಮಿದಾರ ಕೂದಲು ಕೈಗಾರಿಕಾ ಯಂತ್ರಕ್ಕೆ ಸಿಕ್ಕಿ ಕೂದಲು ಅವಳ ಕುತ್ತಿಗೆಗೆ ಸುತ್ತಿಕೊಂಡು ಅಸ್ವಸ್ಥಗೊಂಡಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆಸ್ಪತ್ರೆಯಲ್ಲಿ 20 ದಿನವಾದರೂ ಆಕೆಗೆ ಪ್ರಜ್ಞೆ ಮರುಕಳಿಸದೆ ಸಾವನ್ನಪ್ಪಿದ್ದಾಳೆ ಎಂದು ಆಸ್ಪತ್ರೆಯ ಸಿಬ್ಬಂದಿ ತಿಳಿಸಿದ್ದಾರೆ.

Leave A Reply