ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಕೋಳಿಯನ್ನು ವಶಕ್ಕೆ ಪಡೆದ ಪೊಲೀಸರು!!! ಅಷ್ಟಕ್ಕೂ ಆ ಕೋಳಿಯಲ್ಲೇನಿತ್ತು?
ಯಾರಾದರೂ ಹೊತ್ತಲ್ಲದ ಹೊತ್ತಲ್ಲಿ ಅಥವಾ ಅನುಮಾನಾಸ್ಪದವಾಗಿ ಓಡಾಡುತ್ತಿದ್ದರೆ ಅಂತಹ ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಾರೆ. ಆದರೆ ಅಮೆರಿಕಾದಲ್ಲಿ ಒಂದು ವಿಚಿತ್ರ ಘಟನೆಯೊಂದು ನಡೆದಿದೆ. ಅನುಮಾನಾಸ್ಪದವಾಗಿ ಓಡಾಡುತ್ತಿದೆ ಎಂದು ಕೋಳಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಅಲ್ಲಿನ ಪೊಲೀಸರು.
ಈ ಘಟನೆ ನಡೆದಿರುವುದು ಅಮೆರಿಕದ ಸೇನಾ ಕಚೇರಿ ಇರುವ ಪೆಂಟಗನ್ ನ ಭದ್ರತಾ ಏರಿಯಾದಲ್ಲಿ. ಈ ಏರಿಯಾದಲ್ಲಿ ಕೋಳಿಯೊಂದು ಅನುಮಾನಾಸ್ಪದವಾಗಿ ಓಡಾಡುತ್ತಿದ್ದರಿಂದ ಅದನ್ನು ವಶಕ್ಕೆ ಪಡೆದಿದ್ದಾರೆಂದು ಅಮೆರಿಕಾದ ಪ್ರಾಣಿದಯಾ ಸಂಘವೊಂದು ಮಾಹಿತಿ ನೀಡಿದೆ.
ಅಷ್ಟಕ್ಕೂ ಆ ಭದ್ರತಾ ಏರಿಯಾದ ಸುತ್ತ ಕೋಳಿ ಹೇಗೆ ಬಂತು ? ಪೆಂಟಗನ್ ಏರಿಯಾ ಒಳಗೆ ಹೇಗೆ ಬಂತು ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಈಗ ಸದ್ಯಕ್ಕೆ ಈ ಕೋಳಿಯನ್ನು ವರ್ಜೀನಿಯಾದಲ್ಲಿ ಕೋಳಿ ಫಾರ್ಮ್ ಹೊಂದಿರುವ ವ್ಯಕ್ತಿಯೊಬ್ಬರು ತೆಗೆದುಕೊಂಡು ಹೋಗಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೂ ಅನುಮಾನದ ಮೇಲೆ ಜನರನ್ನು ಬಂಧಿಸುವುದನ್ನು ಕಂಡಿದ್ದೇವೆ. ಆದರೆ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಕೋಳಿಯನ್ನು ಬಂಧಿಸಿರುವುದು ಆಶ್ಚರ್ಯ ಅನಿಸುವುದು ಸುಳ್ಳಲ್ಲ. ಬಹುಶಃ ಈ ಘಟನೆ ನಡೆದಿರುವುದು ಇದೇ ಮೊದಲು ಅಂದರೆ ತಪ್ಪಾಗಲಾರದು.