ಚಿನ್ನ ಖರೀದಿಸುವ ಮುನ್ನ ಎಚ್ಚರ ಗ್ರಾಹಕರೇ | “ಪ್ಯೂರ್ ಗೋಲ್ಡ್” ಮಾರ್ಕ್ ನೋಡಿ ಮೋಸ ಹೋಗಬೇಡಿ
ಚಿನ್ನ ಅತ್ಯಮೂಲ್ಯ ವಸ್ತು. ಇದನ್ನು ಬೇಕಾಬಿಟ್ಟಿಯಾಗಿ ಖರೀದಿಸಲು ಸಾಧ್ಯವೇ ಇಲ್ಲ. ಎಷ್ಟು ಜಾಗ್ರತೆವಹಿಸಿ ಕೊಂಡುಕೊಂಡರು ಕೆಲವೊಂದು ಬಾರಿ ಮೋಸ ಹೋಗುವ ಸಾಧ್ಯತೆಗಳೇ ಹೆಚ್ಚಾಗಿರುತ್ತದೆ. ಜ್ಯುವೆಲ್ಲರಿ ಶಾಪ್ಗೆ ಹೋಗಿ ಚಿನ್ನದ ಆಭರಣಗಳನ್ನು ಖರೀದಿಸಿದ್ರೆ ಒಮ್ಮೆ ಮತ್ತೆ ಪರೀಕ್ಷೆ ಮಾಡಿ ನೋಡಲೇ ಬೇಕಾದ ಪರಿಸ್ಥಿತಿ ಬಂದಿದೆ. ಯಾಕಂದ್ರೆ ಆಲ್ ಮಾರ್ಕ್ ಇದ್ದರೆ ಒಡವೆ ಪ್ಯೂರ್ ಗೋಲ್ಡ್ ಅಲ್ಲ!
ಹೌದು.ಖತರ್ನಾಕ್ ಗ್ಯಾಂಗ್ ಪ್ಯೂರ್ ಗೋಲ್ಡ್ ಅಂತ ನಕಲಿ ಚಿನ್ನ ಮಾರಾಟ ಮಾಡಿದ್ದು,ಬೆಂಗಳೂರು ನಗರದ ಬಹುತೇಕ ಅಂಗಡಿಗಳಿಗೆ ಇವರೇ ಆಭರಣಗಳನ್ನು ಸರಬರಾಜು ಮಾಡ್ತಿದ್ದರಂತೆ. ಇದೀಗ ಒಡವೆ ಖರೀದಿಸಿದವರ ಎದೆಯಲ್ಲಿ ನಡುಕ ಶುರುವಾಗಿರೋದಂತೂ ಖಂಡಿತ.ಇವರು ಕೆಮಿಕಲ್ ಬಳಸಿ ಆಭರಣಗಳನ್ನು ತಯಾರಿಸುತಿದ್ದು,ಒಡವೆಗಳು ಪಳಪಳ ಹೊಳೆಯುವಂತೆ ಮಾಡಿ ಮೋಸ ಗೊಳಿಸುತಿದ್ದ ಚಿನ್ನ ಕಲಬೆರಕೆ ಗ್ಯಾಂಗ್ನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಖತರ್ನಾಕ್ ಗ್ಯಾಂಕ್ ಕೆಮಿಕಲ್ ಮಿಕ್ಸ್ ಮಾಡಿ ಆಭರಣ ತಯಾರಿಸಿ ಬಳಿಕ ಅವುಗಳನ್ನು ಅಂಗಡಿಗಳಿಗೂ ಮಾರಾಟ ಮಾಡಿದ್ದಾರೆ. ನಾಲ್ವರು ಆರೋಪಿಗಳು ಹೋಲ್ ಸೇಲ್ನಲ್ಲಿ ಚಿನ್ನದ ಗಟ್ಟಿ ಮಾರಾಟ ಮಾಡ್ತಿದ್ರು.ಚಿನ್ನಕ್ಕೆ ಕೆಮಿಕಲ್ ಬಳಸಿ 99.9% ಪ್ಯೂರ್ ಗೋಲ್ಡ್ ಎಂದು ಮಾರಾಟ ಮಾಡಿದ್ದಾರೆ. ಬೇರೆಡೆಯಿಂದ ಒರಿಜಿನಲ್ ಗೋಲ್ಡ್ ತರಿಸಿ ಅದಕ್ಕೆ ಕೆಮಿಕಲ್ ಬಳಸಿ ಆಭರಣಗಳನ್ನು ತಯಾರಿಸುತಿದ್ದರು.90 ಪರ್ಸೆಂಟ್ ಚಿನ್ನಕ್ಕೆ 10 ಪರ್ಸೆಂಟ್ ಕೆಮಿಕಲ್ ಮಿಕ್ಸ್ ಮಾಡಲಾಗ್ತಿತ್ತು. ಅಸ್ಮೀಯಮ್ ಸ್ಪಾಂಜ್ ಎಂಬ ಕೆಮಿಕಲ್ ಬೆರಕೆ ಮಾಡುತ್ತಿದ್ರು ಈ ಆರೋಪಿಗಳು ನಗರ ಹಾಗೂ ರಾಜ್ಯದ ಹಲವು ಚಿನ್ನದ ವ್ಯಾಪಾರಿಗಳಿಗೆ ಚಿನ್ನ ಮಾರಾಟ ಮಾಡಿದ್ದಾರೆ.
Valcambi Suisse 100 g gold 999.0,Metalor, Switzerland 100g, 999.0, Ethihad, Dubai, UAE 10 Tolas 999.0, Agro 100g 999.0, 5 Credit, Suisse 100g 999.0ಈ ಹೆಸರಿನಲ್ಲಿ ಸೀಲ್ ಗಳನ್ನು ಹಾಕಿ ಚಿನ್ನವನ್ನು ಮಾರಾಟ ಮಾಡ್ತಿದ್ದು,ಸಿಸಿಬಿ ಪೊಲೀಸರ ಕಾರ್ಯಾಚರಣೆಯಲ್ಲಿ ಕಲಬೆರಕೆ ಚಿನ್ನದ ದಂಧೆ ಬಯಲಾಗಿದೆ.
ರಾಜೇಶ್, ಅಜಯ್ ಕಾಂತಿಲಾಲ್, ಅಕ್ಷಯ್ ಮತ್ತು ಹೃತಿಕ್ ಎಂಬುವರನ್ನು ಪೊಲೀಸರು ಬಂಧಿಸಿದ್ಧಾರೆ. ವಿಚಾರಣೆ ವೇಳೆ ಯಾವ ರೀತಿ ಗೋಲ್ಡ್ಗೆ ಕೆಮಿಕಲ್ ಮಿಕ್ಸ್ ಮಾಡುತಿದ್ದರೆಂದು ಅವರೇ ಬಾಯ್ಬಿಟ್ಟಿದ್ದಾರೆ. ಬಂಧಿತ ನಾಲ್ವರು ಆರೋಪಿಗಳು ಹೋಲ್ ಸೇಲ್ ಚಿನ್ನದ ಗಟ್ಟಿಗಳನ್ನು ಮಾರಾಟ ಮಾಡುವ ಕೆಲಸ ಮಾಡುತ್ತಿದ್ದು,ಕಳೆದ ಆರು ತಿಂಗಳಿಂದ ವ್ಯವಹಾರ ಮಾಡುತ್ತಿದ್ದಾರೆ.
ಆರೋಪಿಗಳ ಬಳಿ 80 ಲಕ್ಷ ಮೌಲ್ಯದ 1.8 ಕೆ ಜಿ ಚಿನ್ನದ ಗಟ್ಟಿ ವಶಕ್ಕೆ ಪಡೆಯಲಾಗಿದೆ. ಹಲಸೂರು ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಂಧೆ ನಡೆಯುತ್ತಿತ್ತು. ಸಿಸಿಬಿ ಪೊಲೀಸರ ಕಾರ್ಯಾಚರಣೆಯಲ್ಲಿ ಕಲಬೆರಕೆ ಚಿನ್ನದ ದಂಧೆ ಬಯಲಾಗಿದೆ.