ಸಾಧನೆಗೆ ವಯಸ್ಸು ದೊಡ್ಡದ್ದಲ್ಲ ಎಂದು ತೋರಿಸಿಕೊಟ್ಟ 54 ವರ್ಷದ ವ್ಯಕ್ತಿ | ಮಗಳ ಜೊತೆಗೆ ನೀಟ್ ಎಕ್ಸಾಮ್ ಬರೆದು ಎಂಬಿಬಿಎಸ್ ಸೀಟು ಗಿಟ್ಟಿಸಿಕೊಂಡ ಛಲಗಾರ!

ಇದೊಂದು ಸಾಧನೆ ಅಂತನೇ ಹೇಳಬಹುದು ಅಥವಾ ಕಠಿಣ ಪರಿಶ್ರಮದ ಫಲ ಅಂತಾನೇ ಹೇಳಬಹುದು. ಬಿಪಿಸಿಎಲ್ ಕೊಚ್ಚಿ ರಿಫೈನರಿ ಮುಖ್ಯ ವ್ಯವಸ್ಥಾಪಕರಾಗಿರುವ ಲೆಫ್ಟಿನೆಂಟ್ ಕರ್ನಲ್ ಮುರುಗಯ್ಯನ್ ತಮ್ಮ54 ನೇ ವಯಸ್ಸಿನಲ್ಲಿ ನೀಟ್ ಪರೀಕ್ಷೆ ಬರೆದು ಎಂಬಿಬಿಎಸ್ ಸೀಟು ಗಿಟ್ಟಿಸಿಕೊಂಡಿದ್ದಾರೆ. ಇನ್ನೊಂದು ವಿಶೇಷ ಏನೆಂದರೆ ಇವರು ಪರೀಕ್ಷೆ ಬರೆದಿರೋದು ತಮ್ಮ 18 ಹರೆಯದ ಮಗಳೊಂದಿಗೆ.

ಮಗಳು ಶೀತಲ್ ಜೊತೆ ಓದಿ ನೀಟ್ ಪರೀಕ್ಷೆಗೆ ಹಾಜರಾಗಿ ಪಾಸಾಗಿ ಮುರುಗಯ್ಯನ್ ಅವರಿಗೆ ಶ್ರೀ ಲಲಿತಾಂಬಿಕಾ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಲಭಿಸಿದ್ದು, ಪುತ್ರಿ ಶೀತಲ್ ಅವರಿಗೆ ಪಾಂಡಿಚೇರಿಯ ವಿನಾಯಕ ಮಿಷನ್ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಸಿಕ್ಕಿದೆ. ಮುರುಗಯ್ಯನ್ ಅವರು ಎಂಜಿನಿಯರಿಂಗ್, ಕಾನೂನು ಮತ್ತು ವ್ಯವಹಾರ ಆಡಳಿತದಲ್ಲಿ ಪದವಿಗಳನ್ನು ಪಡೆದಿದ್ದಾರೆ. ಆದರೆ ಮುರುಗಯ್ಯನ್ ಅವರಿಗೆ ಸಣ್ಣಂದಿನಲ್ಲಿಯೇ ತಾವು ವೈದ್ಯರಾಗಬೇಕು ಎಂಬ ಆಸೆ ಇತ್ತಂತೆ. ಆದರೆ ಮನೆಯವರ ಒತ್ತಾಯಕ್ಕೆ ಮಣಿದಯ ಇಂಜಿನಿಯರ್ ಆಗಿದ್ದಾರೆ.

ಗರಿಷ್ಠ ವಯೋಮಿತಿ ಇಲ್ಲದೆ ಯಾರೂ ಬೇಕಾದರೂ ನೀಟ್ ಪರೀಕ್ಷೆ ಬರೆಯಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ಮುರುಗಯ್ಯನವರ ಡಾಕ್ಟರ್ ಆಗುವ ಆಸೆ ಮತ್ತೆ ಮೊಳಕೆಯೊಡೆಯಿತು. ರಿಫೈನರಿಯಲ್ಲಿ ತಮ್ಮ ಕೆಲಸದ ಅವಧಿ ಮುಗಿದ ನಂತರ ಮನೆಗೆ ಬಂದು ಮಗಳ ಜೊತೆ ನೀಟ್ ಪರೀಕ್ಷೆಗೆ ತಯಾರಿ ಮಾಡಿದರು‌. ಅಪ್ಪ ಮಗಳು ಜೊತೆಯಾಗಿಯೇ ಓದುತ್ತಿದ್ದರು. ಅಪ್ಪನಿಗೆ ಬೇಗನೇ ಅರ್ಥವಾಗುತ್ತಿತ್ತು. ಅಪ್ಪ ಪರೀಕ್ಷೆ ಬರೆದು ತೇರ್ಗಡೆ ಹೊಂದಿ ನನಗೆ ಸೀಟು ಸಿಗದಿದ್ದರೆ ಎಂಬ ಚಿಂತೆ ಮಾಡುತ್ತಿದ್ದ ಮಗಳು ಈಗ ಇಬ್ಬರಿಗೂ ಸೀಟು ದೊರಕಿರುವುದು ಆಕೆಯ ಮುಖದಲ್ಲಿ ಖುಷಿ ತಂದಿದೆ.

ಮುರುಗಯ್ಯ ಅವರ ಈ ಸಾಧನೆಯ ಹಿಂದೆ ಅವರ ಹೆಂಡತಿ ಮಾಲತಿ ಅವರ ಸಂಪೂರ್ಣ ಬೆಂಬಲ ಇತ್ತು. 21 ವರ್ಷಗಳಿಂದ ತ್ರಿಪ್ಪೂಣಿತುರದ ಮಾಲತಿ ನಿಲಯದಲ್ಲಿ ವಾಸಿಸುತ್ತಿದ್ದಾರೆ. ಮುಂದಿನ ಸೀಟು ಹಂಚಿಕೆ ಆದ ನಂತರವೇ ಯಾವ ಕಾಲೇಜಿಗೆ ಸೇರಬೇಕೆಂದು ನಿರ್ಧರಿಸಲಾಗುವುದು ಎಂದು ಮುರುಗಯ್ಯ ಹೇಳಿದ್ದಾರೆ.

Leave A Reply

Your email address will not be published.