ವಧು ಹಾರ ಹಾಕುವಾಗ ಪುಷ್ಪ ಚಿತ್ರದ ಡೈಲಾಗ್ ಹೊಡೆದ ವರ | ಈ ಡೈಲಾಗಿಗೆ ವಧುವಿನ ಉತ್ತರವೇನು?

ಇತ್ತೀಚಿನ ದಿನಗಳಲ್ಲಿ ಮದುವೆಯಾಗುವ ಸಂದರ್ಭದಲ್ಲಿ ಸೆರೆಯಾಗುವ ಕೆಲವೊಂದು ತಮಾಷೆಯ ದೃಶ್ಯಗಳು ಸಖತ್ ವೈರಲ್ ಆಗುತ್ತಿದೆ. ಸಾಮಾನ್ಯವಾಗಿ ವಧು ವರರು ಹಾರ ಬದಲಾಯಿಸುವ ಸಂದರ್ಭದಲ್ಲಿ ಇಬ್ಬರನ್ನು ಕೂಡಾ ಕಾಡಿಸಲು ಸ್ನೇಹಿತರು ಸಂಬಂಧಿಕರ ದಂಡೇ ಅಲ್ಲಿ ಇರುತ್ತದೆ. ಆದರೆ ಇಲ್ಲಿ ವರನೇ ವಧುವಿಗೆ ಕಾಡಿದ್ದಾನೆ. ಹೇಗೇ ಅಂತೀರಾ ? ಬನ್ನಿ ತಿಳಿಯೋಣ, ಆದರೆ ಇದನ್ನು ವಿವರಿಸುವ ಮೊದಲು ನಾವು ಇತ್ತೀಚೆಗಷ್ಟೇ ಬಿಡುಗಡೆಯಾದ ಪುಷ್ಪ ಸಿನಿಮಾದ ಬಗ್ಗೆ ಮಾತನಾಡೋಣ.

 

ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದು ಮುನ್ನುಗ್ಗಿದೆ. ಬಹು ಭಾಷೆಯಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ ಸಾಕಷ್ಟು ಜನಮನ್ನಣೆ ಗಳಿಸಿದೆ. ಜೊತೆಗೆ ಈ ಚಿತ್ರದ ಹಾಡುಗಳು, ನೃತ್ಯ ಹಾಗೂ ಸಂಭಾಷಣೆ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು.

ಈ ವರ ಕೂಡಾ ಈ ಪುಷ್ಪಾ ಸಿನಿಮಾದ ಒಂದು ಡೈಲಾಗನ್ನು ಈ ಸಂದರ್ಭದಲ್ಲಿ ಹೇಳಿದ್ದಾನೆ. ವಧು ವರನಿಗೆ ಹಾರ ಹಾಕಲು ಸಿದ್ಧವಾಗುತ್ತಿರುವ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ಈ ವೇಳೆ ಹಾರ ಹಾಕಲು ಬರುವ ತನ್ನ ಸಂಗಾತಿಯನ್ನು ತಡೆಯುವ ವರ ‘ ಪುಷ್ಪ…ಪುಷ್ಪರಾಜ್ ..ನಾನು ತಲೆಬಾಗುವುದಿಲ್ಲ’ ಎಂದು ಪುಷ್ಪ ಚಿತ್ರದ ಡೈಲಾಗ್ ಹೊಡೆಯುತ್ತಾನೆ‌ ವರ. ಜೊತೆಗೆ ಅಲ್ಲು ಅರ್ಜುನ್ ರೀತಿ ನಟಿಸುತ್ತಾನೆ. ಇದನ್ನು ಕಂಡು ಅಲ್ಲಿದ್ದವರೆಲ್ಲ ನಗುವಿನಲೆಯಲ್ಲಿ ತೇಲುತ್ತಾರೆ. ವಧು ತನ್ನ ಸಂಗಾತಿಯ ಈ ಡೈಲಾಗಿಗೆ ನಾಚಿ ನೀರಾಗಿ ನಸು ನಕ್ಕುತ್ತಾಳೆ.

ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ನಿಮಗೂ ಈ ದೃಶ್ಯ ಮನಸ್ಸಿಗೆ ಮುದ ನೀಡಬಹುದು.

Leave A Reply

Your email address will not be published.