ಬೆಂಗಳೂರು ರೈಲ್ವೇ ನಿಲ್ದಾಣದೊಳಗೆ ತಲೆಎತ್ತಿದ ಮಸೀದಿ ತೆರವು !!!
ಬೆಂಗಳೂರು : ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಲ್ಲಿ ನಮಾಜ್‌ಗೆಂದು ಬಳಕೆ ಮಾಡುತ್ತಿದ್ದ ತಾತ್ಕಾಲಿಕ ಕೊಠಡಿಯನ್ನು ಇದೀಗ ತೆರವುಗೊಳಿಸಿ ನೌಕರರ ವಿಶ್ರಾಂತಿಗೃಹಕ್ಕೆ ಮೀಸಲು ಇಡಲಾಗಿದೆ.
ಕೆಲವು ದಿನಗಳ ಹಿಂದೆ ದೂರು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ವಿಶ್ರಾಂತಿ ಗೃಹದಲ್ಲಿ ಪ್ರಾರ್ಥನೆ ಮಾಡುತ್ತಿದ್ದ ವೀಡಿಯೋ ವೈರಲ್ ಆಗಿತ್ತು. ಇದೀಗ ಅದನ್ನು ವಿಶ್ರಾಂತಿಗೃಹಕ್ಕೆ ಮಾತ್ರ ಮೀಸಲು ಇಡಲಾಗಿದೆ. ಹಿಂದೂಪರ ಸಂಘಟನೆಗಳಿಂದ ದೂರು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ವಿಶ್ರಾಂತಿ ಗೃಹದಲ್ಲಿದ್ದ ಉರ್ದು ಭಾಷೆಯ ನಾಮಫಲಕ ತೆರವು ಮಾಡಿದ್ದು, ಗಣಪತಿ, ಅಲ್ಲಾ, ಯೇಸು ಫೋಟೋ ಅಳವಡಿಸಲಾಗಿದೆ.