ರಾಷ್ಟ್ರಗೀತೆಗೆ ಅಗೌರವ ತೋರಿದ ಮಮತಾ ಬ್ಯಾನರ್ಜಿ ಅವರಿಗೆ ಸಮನ್ಸ್
ಜಾರಿ ಮಾಡಿದ ನ್ಯಾಯಾಲಯ

ಮುಂಬೈ: ರಾಷ್ಟ್ರಗೀತೆಗೆ ಅವಮಾನ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮುಂಬೈನ ನ್ಯಾಯಾಲಯವು ಸಮನ್ಸ್
ಜಾರಿ ಮಾಡಿದೆ.

2021 ನೇ ಇಸವಿಯಲ್ಲಿ ಮುಂಬೈಗೆ ಭೇಟಿ ನೀಡಿದ ವೇಳೆ ಮಮತಾ ಬ್ಯಾನರ್ಜಿ ಕಾರ್ಯಕ್ರಮವೊಂದರಲ್ಲಿ,ರಾಷ್ಟ್ರಗೀತೆ ಹಾಡುವ
ವೇಳೆ ಎದ್ದು ನಿಲ್ಲದೆ ಮಮತಾ ಅವರು ಅಗೌರವ ತೋರಿಸಿ ಅವಮಾನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಬಿಜೆಪಿ ನಾಯಕ ವಿವೇಕಾನಂದ ಗುಪ್ತಾ ಎಂಬವರು ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.

ಈ ದೂರಿನ ಮೇರೆಗೆ ಮಾರ್ಚ್ ಎರಡು ಅಥವಾ ಅದರ ಮೊದಲು ಮಮತಾ ಅವರು ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂದು ನ್ಯಾಯಾಲಯ ಸೂಚಿಸಿದೆ.

Leave A Reply