ಕಣ್ಣೊಳಗೆ ಜಿಗಣೆ ಹೋಗಿದೆ ಎಂದು ಭಾವಿಸಿ ತನ್ನ ಕೈಯಾರೆ ಕಣ್ಣಿನ ಗುಡ್ಡೆಯನ್ನೇ ಕಿತ್ತು ನೆಲಕ್ಕೆಸೆದ ಭೂಪ !!

ಭದ್ರಾವತಿ :ಇಲ್ಲೊಬ್ಬ ವ್ಯಕ್ತಿ ಕಣ್ಣಿಗೆ ಜಿಗಣೆ ಹೋಗಿದೆ ಎಂದು ಭಾವಿಸಿ ತನ್ನ ಕೈಯಿಂದಲೇ ಕಣ್ಣಿನ ಗುಡ್ಡೆಯನ್ನು ಕಿತ್ತು ಬಿಸಾಕಿ ಮೊಮ್ಮಗನಿಂದ ಅದನ್ನು ಹೊಡೆಯುವಂತೆ ಹೇಳಿದ ಘಟನೆ ನಡೆದಿದೆ.

 

ಜನವರಿ 12 ರಾತ್ರಿ ಮನೆಯಲ್ಲಿ ಟಿವಿ ನೋಡುತ್ತಿದ್ದ ನಂಜುಂಡಸ್ವಾಮಿ ಎಂಬುವವರು ಮನೆಯಿಂದ ಹೊರಗೆ ಬಂದಿದ್ದು,ನಂತರ ಮಕ್ಕಳಿಗೆ ಚಾಕೊಲೇಟ್ ಕೊಡಿಸಿ ಮನೆಯ ಹೊರಗೆ ಕುಳಿತಿದ್ದಾರೆ. ಈ ವೇಳೆ ಬಲ ಕಣ್ಣೋಳಗೆ ಯಾವುದೋ ಹುಳು ಹೋಗಿದೆ ಎಂಬ ಅನುಮಾನಗೊಂಡ ನಂಜುಂಡಸ್ವಾಮಿ, ಜಿಗಣೆ ಹೋಗಿರಬಹುದು ಎಂದು ಭಾವಿಸಿ ಬಲ ಕಣ್ಣನ್ನು ಕೈಯಿಂದ ಕಿತ್ತು ನೆಲಕ್ಕೆ ಬಿಸಾಕಿದ್ದಾರೆ.

ಅಷ್ಟೇ ಅಲ್ಲದೆ ಮೊಮ್ಮಗ ಮದನ್ ನನ್ನು ಕರೆದು ಕಣ್ಣೋಳಗೆ ಜಿಗಣೆ ಹೋಗಿತ್ತು ಅದನ್ನು ಕಿತ್ತು ನೆಲಕ್ಕೆ ಹಾಕಿದ್ದೇನೆ. ಅದು ನನ್ನ ರಕ್ತ ಕುಡಿದಿದ್ದು ಅದನ್ನು ಹೊಡೆದು ಸಾಯಿಸುವಂತೆ ಹೇಳಿದ್ದಾರೆ. ಕತ್ತಲೆಯಲ್ಲಿ ಸರಿಯಾಗಿ ಏನೂ ಕಾಣದ ಕಾರಣ ಅಜ್ಜ ಹೇಳಿದಂತೆ ಮದನ್ ಕಲ್ಲು ಮತ್ತು ಕೋಲಿನಿಂದ ಕಣ್ಣನ್ನು ಜಜ್ಜಿ ಹಾಕಿದ್ದಾನೆ.

ಅದೇ ವೇಳೆ ತಂದೆಯ ಬಲ ಕಣ್ಣಿನಿಂದ ರಕ್ತ
ಸ್ರಾವವಾಗುತ್ತಿದ್ದದನ್ನು ಮಗ ಷಣ್ಮುಖ ಗಮನಿಸಿದ್ದಾರೆ.
ಆಗ ಅವರಿಗೆ ತಮ್ಮ ಮಗ ಮದನ್ ಹೊಡೆದು
ಹಾಕಿದ್ದು ಜಿಗಣೆ ಅಲ್ಲ. ಬದಲಿಗೆ ತಮ್ಮ ತಂದೆಯ
ಕಣ್ಣು ಎಂಬುದು ಗೊತ್ತಾಗಿದೆ. ತಕ್ಷಣವೇ ತಮ್ಮ
ತಂದೆಯನ್ನು ಭದ್ರಾವತಿಯ ಸರ್ಕಾರಿ ಆಸ್ಪತ್ರೆಗೆ
ಕರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ
ಕೊಡಿಸಿದ್ದಾರೆ. ಸದ್ಯ ವ್ಯಕ್ತಿಯನ್ನು ಸರ್ಕಾರಿ ಮೆಗ್ಗಾನ್
ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಿಲಾಗಿದೆ.

Leave A Reply

Your email address will not be published.