ತನ್ನ ಮಗಳನ್ನೇ ಮೃತ್ಯು ಕೂಪಕ್ಕೆ ನೂಕಿದ ಪಾಪಿ ತಾಯಿ!!| ತನ್ನ ಕೈಯಾರೆ ಮೂರು ವರ್ಷದ ಕಂದಮ್ಮನನ್ನು ಕರಡಿ ಬಾಯಿಗೆ ತಳ್ಳಿದ ವೀಡಿಯೋ ವೈರಲ್

ತನ್ನ ಮಗುವನ್ನು ಸಾಕಿ ಸಲಹಿ ರಕ್ಷಿಸಬೇಕಾದ ತಾಯಿಯೇ ಮೃತ್ಯು ಕೂಪಕ್ಕೆ ನೂಕಿದರೆ ಹೇಗಾಗಬೇಡ. ಹಾಗೆಯೇ ಇಲ್ಲೊಬ್ಬ ತಾಯಿ ತನ್ನ 3 ವರ್ಷದ ಮಗಳನ್ನು ಕರಡಿ ಬಾಯಿಗೆ ನೂಕಿದ ಆಘಾತಕಾರಿಯಾದ ಘಟನೆ ಉಜ್ಬೇಕಿಸ್ತಾನ್‍ನಲ್ಲಿ ನಡೆದಿದೆ.

 

ತಾಯಿ ತನ್ನ ಮೂರು ವರ್ಷದ ಕಂದಮ್ಮನ ಪ್ರಾಣ ತೆಗೆಯಲು ಕರಡಿ ಬಾಯಿಗೆ ನೂಕಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಭಯಾನಕ ವೀಡಿಯೋ ನೋಡಿದ ನೆಟ್ಟಿಗರು ಮಹಿಳೆಯನ್ನು ಶಪಿಸುತ್ತಿದ್ದಾರೆ.

ಉಜ್ಬೇಕಿಸ್ತಾನ್‍ನಲ್ಲಿ ತಾಷ್ಕೆಂಟ್ ಮೃಗಾಲಯಕ್ಕೆ ತಾಯಿ ತನ್ನ ಮಗಳೊಂದಿಗೆ ಬಂದಿದ್ದಾಳೆ. ಈ ವೇಳೆ ಬಾಲಕಿ ಕರಡಿ ನೋಡುತ್ತ ಕಂಬಿ ಹಿಡಿದು ನಿಂತಿರುತ್ತಾಳೆ. ಆಗ ತಾಯಿ ಹಿಂದೆಯಿಂದ ಬಾಲಕಿಯ ಕೈಯನ್ನು ಕಂಬಿಯಿಂದ ಬಿಡಿಸಿ ಕರಡಿ ಇದ್ದ ಜಾಗಕ್ಕೆ ನೂಕಿದ್ದಾಳೆ. 3 ವರ್ಷದ ಬಾಲಕಿ 16 ಅಡಿಯಿಂದ ಕೆಳಗೆ ಕರಡಿ ಇದ್ದ ಜಾಗಕ್ಕೆ ಬೀಳುತ್ತಾಳೆ. ಆಗ ಕರಡಿ ಬಾಲಕಿ ಬಿದ್ದ ಜಾಗಕ್ಕೆ ಓಡಿ ಹೋಗುತ್ತದೆ.

ಸುದ್ದಿ ತಿಳಿದ ತಕ್ಷಣ ಸಿಬ್ಬಂದಿ ಬಾಲಕಿಯನ್ನು ರಕ್ಷಣೆ ಮಾಡಲು ಕರಡಿ ಇದ್ದ ಜಾಗಕ್ಕೆ ಧಾವಿಸುತ್ತಾರೆ. ಅದೃಷ್ಟವಶಾತ್ ಬಾಲಕಿಯನ್ನು ಕರಡಿ ಏನು ಮಾಡಿಲ್ಲ. ಮೇಲಿಂದ ಬಿದ್ದ ಕಾರಣ ಬಾಲಕಿಗೆ ಸ್ಪಲ್ಪ ಗಾಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆಯು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ರೈಲಿಂಗ್‍ನಿಂದ ಸುಮಾರು 16 ಅಡಿ ಕೆಳಗೆ ಬಿದ್ದ ಬಾಲಕಿಯನ್ನು ಮೃಗಾಲಯದ ಸಿಬ್ಬಂದಿ ರಕ್ಷಿಸುತ್ತಿರುವುದನ್ನು ನೋಡಬಹುದು. ಗಾಯವಾಗಿದ್ದ ಪರಿಣಾಮ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಂತೆಯೇ ಕೊಲೆಗೆ ಯತ್ನಿಸಿದ ಮಹಿಳೆ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave A Reply

Your email address will not be published.