ಪಿತೃಗಳಿಗೆ ಅರ್ಪಿತವಾದ ದಿನ ಅಮಾವಾಸ್ಯೆ ತಿಥಿಯಂದು ಮಾಡಬಾರದ ಕಾರ್ಯಗಳು ಯಾವುವೆಂಬ ಬಗ್ಗೆ ನಿಮಗೆ ತಿಳಿದಿದೆಯೇ?? ಇಲ್ಲಿದೆ ನೋಡಿ ಈ ಕುರಿತು ಮಾಹಿತಿ

ಸನಾತನ ಸಂಸ್ಕೃತಿಯಲ್ಲಿ ಅನೇಕ ಆಚರಣೆಗಳಿದ್ದು, ಕೆಲವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ಪ್ರತಿ ಆಚರಣೆ ಹಿಂದೆಯೂ ವಿಶೇಷ ಅರ್ಥ ಹಾಗೂ ಮಹತ್ವವಿದೆ. ಅಂತೆಯೇ ಅಮಾವಾಸ್ಯೆ ಮತ್ತು ಹುಣ್ಣಿಮೆ ತಿಂಗಳಿಗೊಮ್ಮೆ ಬರುವ ತಿಥಿಯಾಗಿದೆ. ಪಂಚಾಂಗದಲ್ಲಿ ನಮೂದಿಸಿದ ತಿಥಿ, ಮೂಹೂರ್ತಗಳಿಗೆ ಅನುಗುಣವಾಗಿ ಕೆಲವೊಂದು ದಿನಗಳು ಕೆಲವು ಕೆಲಸಗಳಿಗೆ ನಿಷಿದ್ಧವಾಗಿರುತ್ತದೆ. ಹಿಂದೂ ಸಂಪ್ರದಾಯದ ಪ್ರಕಾರ ಈ ರೀತಿ ಅನೇಕ ವಿಷಯಗಳಿಗೆ ನಿರ್ಬಂಧವಿದೆ. ಉದಾಹರಣೆಗೆ ಹೇಳುವುದಾದರೆ ಹುಟ್ಟಿದ ವಾರದಂದು ಉಗುರು ಕತ್ತರಿಸುವುದು, ತಲೆಕೂದಲನ್ನು ಕತ್ತರಿಸುವುದು ಇತ್ಯಾದಿ ಕ್ರಿಯೆಗಳನ್ನು ಮಾಡುವಂತಿಲ್ಲ.

ಪಿತೃಗಳಿಗೆ ಅರ್ಪಿತವಾದ ದಿನ ಅಮವಾಸ್ಯೆ ತಿಥಿಯಾಗಿದೆ. ಹಾಗಾಗಿ ಈ ದಿನ ಒಳ್ಳೆಯ ಕಾರ್ಯಗಳಿಗೆ, ಓಡಾಟಗಳಿಗೆ ಹೆಚ್ಚು ಪ್ರಾಶಸ್ತ್ಯದಾಯಕವಲ್ಲ ಎಂದೇ ನಂಬಲಾಗಿದೆ. ಇದರ ಜೊತೆಗೆ ಈ ದಿನದಂದು ಕೆಲವು ವಸ್ತುಗಳನ್ನು ಮನೆಗೆ ತರುವುದೂ ಶ್ರೇಯಸ್ಸಲ್ಲ, ಜೊತೆಗೆ ಮನೆಯಲ್ಲಿ ಮಾಡುವುದೂ ಉಚಿತವಲ್ಲ. ಇದರಿಂದ ಅನೇಕ ನಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಆರ್ಥಿಕ ನಷ್ಟ, ಆರೋಗ್ಯ ತೊಂದರೆ ಹೀಗೆ ಹಲವು ಸಂಕಷ್ಟಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಹಾಗಿದ್ದರೆ ಆ ವಸ್ತುಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಮದ್ಯ – ಮಾಂಸ

ಅಮಾವಾಸ್ಯೆಯಂದು ಮಾಂಸ ಅಥವಾ ಮದ್ಯ ಸೇವನೆ ಮಾಡಬಾರದು. ಜೊತೆಗೆ ಇವುಗಳನ್ನು ಖರೀದಿಸಿ ತರುವುದೂ ಒಳ್ಳೆಯದಲ್ಲ, ಇದರಿಂದ ಅಶುಭ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೆ, ಹೀಗೆ ಮಾಡುವುದರಿಂದ ಶನಿಯ ಅವಕೃಪೆಗೂ ತುತ್ತಾಗಬೇಕಾಗುತ್ತದೆ. ಆದ್ದರಿಂದ ಈ ದಿನದಂದು ಈ ಎರಡೂ ವಸ್ತುಗಳಿಂದ ದೂರವಿರಿ.

ಗೋಧಿ ಹಿಟ್ಟು

ಗೋಧಿ ಇಲ್ಲವೇ ಗೋಧಿ ಹಿಟ್ಟು ಪದಾರ್ಥವನ್ನು ಅಮಾವಾಸ್ಯೆ ದಿನದಂದು ಮನೆಗೆ ತರುವುದು ಶುಭವಲ್ಲ. ಭಾದ್ರಪದ ಮಾಸದ ಅಮಾವಾಸ್ಯೆ ದಿನ ಮಾತ್ರ ಗೋಧಿ ಹಿಟ್ಟನ್ನು ತರಲೇಬಾರದು. ಈ ದಿನ ಗೋಧಿ ಉತ್ಪನ್ನವನ್ನು ಖರೀದಿಸುವುದು ಪಿತೃಗಳಿಗೆ ಮಾತ್ರ ಎಂದು ಶಾಸ್ತ್ರ ಹೇಳುತ್ತದೆ.

ಎಣ್ಣೆ ಹಚ್ಚಬಾರದು

ಅಮಾವಾಸ್ಯೆ ದಿನದಂದು ತಲೆಕೂದಲಿಗೆ ಎಣ್ಣೆ ಹಾಕುವುದು ಅಶುಭವಾಗಿದೆ. ಇದರಿಂದ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಪಿತೃಗಳ ನಿಮಿತ್ತ ಇರುವ ಅಮಾವಾಸ್ಯೆಯಂದು ಸಾತ್ವಿಕ ಸ್ಥಿತಿಯನ್ನು ಕಾಯ್ದುಕೊಳ್ಳಬೇಕು. ಇದರ ಸಲುವಾಗಿ ತಲೆಗೆ ಎಣ್ಣೆ ಹಾಕಿಕೊಳ್ಳುವುದಕ್ಕೆ ಅವಕಾಶವಿಲ್ಲ ಎಂದು ಹೇಳಲಾಗಿದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಅಮಾವಾಸ್ಯೆಯಂದು ಚಂದ್ರನ ಪಕ್ಷ ಪರಿವರ್ತನೆಯಾಗುತ್ತದೆ. ಹೀಗಾಗಿ ಈ ದಿನ ಇಂಥ ಕೆಲಸಗಳನ್ನು ಮಾಡಬಾದರು. ಹಾಗಾಗಿ ಅಂದು ಎಣ್ಣೆಯನ್ನು ದಾನ ಮಾಡುವುದರಿಂದ ಶನಿ ದೇವರ ಕೃಪೆಗೆ ಪಾತ್ರರಾಗುವುದಲ್ಲದೆ, ಶನಿ ಉತ್ತಮ ಪ್ರಭಾವದಿಂದ ಶನಿದೋಷಗಳಿದ್ದರೆ ಅವುಗಳು ನಿವಾರಣೆಯಾಗುತ್ತದೆ.

ಪೊರಕೆ

ಅಮಾವಾಸ್ಯೆಯನ್ನು ಪಿತೃಗಳ ದಿನದ ಜೊತೆಗೆ ಶನಿದೇವರ ದಿನವೂ ಆಗಿದೆ ಎಂದು ಶಾಸ್ತ್ರ ಹೇಳುತ್ತದೆ. ಈ ದಿನದಂದು ಪೊರಕೆಯನ್ನು ಮನೆಗೆ ತಂದರೆ ಲಕ್ಷ್ಮೀದೇವಿಯ ಅವಕೃಪೆಗೆ ಪಾತ್ರರಾಗಬೇಕಾಗಲಿದೆ ಎಂಬ ನಂಬಿಕೆ ಇದೆ. ಇದಲ್ಲದೆ ಮನೆಯಲ್ಲಿ ನಕಾರಾತ್ಮಕ ಶಕ್ತಿಯೂ ಹೆಚ್ಚುತ್ತದೆ. ಅಲ್ಲದೆ, ಅನಾರೋಗ್ಯಗಳಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವೃತ್ತಿ ಕ್ಷೇತ್ರ ಸೇರಿದಂತೆ ಆರ್ಥಿಕವಾಗಿಯೂ ತೊಂದರೆಗಳಾಗುತ್ತವೆ. ಹಾಗಾಗಿ ಅಮಾವಾಸ್ಯೆ ದಿನದಂದು ಪೊರಕೆಯನ್ನು ಮನೆಗೆ ತರಬೇಡಿ.

ಶುಭಕಾರ್ಯಕ್ಕಾಗಿ ವಸ್ತು ಕೊಳ್ಳುವುದು

ಅಮಾವಾಸ್ಯೆಯ ದಿನವು ಪಿತೃಗಳ ಸಲುವಾಗಿ ದಾನ ನೀಡಲು ಶ್ರೇಷ್ಠವಾದ ದಿನವಾಗಿದೆ. ಹಾಗಾಗಿ ಈ ದಿನದಂದು ಶುಭ ಕಾರ್ಯಗಳ ನಿಮಿತ್ತ ಯಾವುದೇ ವಸ್ತುಗಳನ್ನು ಕೊಂಡುಕೊಳ್ಳಬಾರದು. ಇದರಿಂದ ಮನೆಗೆ ಒಳ್ಳೆಯದಾಗದು ಎಂದು ಶಾಸ್ತ್ರ ಹೇಳುತ್ತದೆ.

Leave A Reply

Your email address will not be published.