ಪುಷ್ಪ ಸಿನಿಮಾದಿಂದ ಪ್ರೇರಿತ ಕಳ್ಳತನ!! ತರಕಾರಿ ವಾಹನವೆಂದು ಬೋರ್ಡ್ ಹಾಕಿ ರಕ್ತಚಂದನದ ತುಂಡುಗಳ ಸಾಗಾಟ

ಇತ್ತೀಚೆಗೆ ಬಿಡುಗಡೆಗೊಂಡು ಹೆಚ್ಚು ಸುದ್ದಿಯಾದ ಪುಷ್ಪ ಸಿನಿಮಾದಲ್ಲಿನ ಮರ ಸಾಗಾಟದ ದೃಶ್ಯವೊಂದನ್ನು ತನ್ನ ಕಳ್ಳತನದ ಕಾರ್ಯಕ್ಕೆ ಪ್ರಯೋಗ ನಡೆಸಿದ ಚಾಲಾಕಿ ಕಳ್ಳ, ಕರ್ನಾಟಕದಿಂದ ಸಾಗಿ ಮಹಾರಾಷ್ಟ್ರ ಅರಣ್ಯಾಧಿಕಾರಿಗಳ ಕೈಯ್ಯಲ್ಲಿ ಲಾಕ್ ಆಗಿದ್ದಾನೆ.

 

ಸಿನಿಮಾದಲ್ಲಿ ನಟ ಹಾಲಿನ ಟ್ಯಾಂಕರ್ ನಲ್ಲಿ ಮರ ಸಾಗಿಸಿದರೆ, ಇಲ್ಲಿ ತರಕಾರಿ, ಅಗತ್ಯ ವಸ್ತುಗಳ ಬೋರ್ಡ್ ಹಾಕಿದ ವಾಹನದಲ್ಲಿ ಕರ್ನಾಟಕದ ಎಲ್ಲಾ ಚೆಕ್ ಪೋಸ್ಟ್ ಗಳನ್ನೂ ದಾಟಿಸಿ ಚೌಟ್ಟಿದ್ದಾನೆ. ಹೀಗೆ ಮುಂದಕ್ಕೆ ತೆರಳಿದ್ದ ಕಳ್ಳ ವಾಹನ-ಮಾಲು ಸಹಿತ ಮಹಾರಾಷ್ಟ್ರ ಪೊಲೀಸರ ಅತಿಥಿಯಾಗಿದ್ದು, ಕರ್ನಾಟಕದ ಚೆಕ್ ಪೋಸ್ಟ್ ಗಳಲ್ಲಿನ ಅವ್ಯವಸ್ಥೆ ಬಗ್ಗೆ ದೇಶದಲ್ಲೇ ಸುದ್ದಿಯಾಗುತ್ತಿದೆ.

ಆರೋಪಿ ಯಾಸಿನ್ ಇನಾಯತ್ ಬೆಂಗಳೂರಿನ ಆನೇಕಲ್ ಮೂಲದವನಾಗಿದ್ದು, ತರಕಾರಿ ಹಣ್ಣು, ಅಗತ್ಯ ಸಾಮಗ್ರಿಗಳನ್ನು ವಾಹನದಲ್ಲಿ ರಕ್ತ ಚಂದನದ ತುಂಡುಗಳಣ್ಣಿಟ್ಟು, ಅದರ ಮೇಲೆ ತೋರಿಕೆಗೆ ತರಕಾರಿ ಲೋಡ್ ಮಾಡಿ ಬೆಂಗಳೂರಿನಿಂದ ಹೊರಟು ರಾಜ್ಯದ ಎಲ್ಲಾ ಚೆಕ್ ಪೋಸ್ಟ್ ಗಳನ್ನೂ ದಾಟಿದ್ದಾನೆ.

ಹೀಗೆ ಮುಂದುವರಿದು ಮಹಾರಾಷ್ಟ್ರ ತಲುಪುತ್ತಿದ್ದ ವಾಹನವನ್ನು ಮಿರತ್ ಬಳಿ ತಡೆದಿದ್ದು, ಪರಿಶೀಲಿಸಿದಾಗ ರಕ್ತ ಚಂದನದ ತುಂಡುಗಳು ಪತ್ತೆಯಾಗಿದ್ದು ಕೂಡಲೇ ವಾಹನವನ್ನು ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಲಾಗಿದೆ.

ಇತ್ತ ಕರ್ನಾಟಕದಿಂದ ಈ ರೀತಿಯಾಗಿ ಅಕ್ರಮ ಮರ ಸಾಗಾಟ ನಡೆಯುತ್ತಿದ್ದರೂ ಅರಣ್ಯ ಇಲಾಖೆ ಮಾತ್ರ ಕಣ್ಣು ಮುಚ್ಚಿ ಕುಳಿತಂತಿದೆ. ಚೆಕ್ ಪೋಸ್ಟ್ ನಲ್ಲಿರುವ ಸಿಬ್ಬಂದಿಗಳಿಗೆ ಮಾಮೂಲು ಕೊಟ್ಟರೆ ಏನೂ ಮಾಡಬಹುದು ಎಂಬ ಕಳ್ಳರ ಯೋಚನೆಗಳಿಗೆ ಇನ್ನಾದರೂ ಬ್ರೇಕ್ ಬೀಳಲಿ.

Leave A Reply

Your email address will not be published.