ಚರ್ಮದ ಸಮಸ್ಯೆಗಳ ಜಾಹೀರಾತಿಗಾಗಿ ಖ್ಯಾತ ಹಾಲಿವುಡ್, ಆಸ್ಕರ್ ಪ್ರಶಸ್ತಿ ವಿಜೇತ ನಟನ ಫೋಟೋ ಬಳಕೆ | ಆಸ್ಪತ್ರೆ ಮಂಡಳಿಯ ಯಡವಟ್ಟು
ತಿರುವನಂತಪುರಂ : ತನ್ನ ಚರ್ಮದ ಚಿಕಿತ್ಸಾ ವಿಧಾನದ ಸೌಲಭ್ಯಕ್ಕೆ ಜಾಹೀರಾತು ನೀಡಲು ಬಹು ಆಸ್ಕರ್ ಪ್ರಶಸ್ತಿ ವಿಜೇತ ಹಾಲಿವುಡ್ ನಟ ಮೋರ್ಗನ್ ಫ್ರೀಮನ್ ಅವರ ಫೋಟೋವನ್ನು ವಡಕರ ಸಹಕಾರಿ ಆಸ್ಪತ್ರೆ ಬಳಸಿಕೊಂಡಿತ್ತು.
ಚರ್ಮದ ಟ್ಯಾಗ್ ಗಳು, ಮುಖದ ಮೇಲಿನ ದದ್ದುಗಳು, ಮುಂತಾದ ಚರ್ಮದ ಸಮಸ್ಯೆಗಳನ್ನು ತೆಗೆದುಹಾಕುವಂತಹ ಸೌಲಭ್ಯಗಳನ್ನು ಪಟ್ಟಿ ಮಾಡಿದ ಆಸ್ಪತ್ರೆಯ ಮಂಡಳಿ ಆಫ್ರಿಕನ್- ಅಮೆರಿಕನ್ ನಟನ ಮುಖವನ್ನು ಬಳಸಿಕೊಂಡಿದೆ.
ಈ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಆಸ್ಪತ್ರೆಯ ಮಂಡಳಿ ಜನಾಂಗೀಯ ಮತ್ತು ದೇಹವನ್ನು ಅವಮಾನಿಸಿದ್ದಕ್ಕಾಗಿ ಟೀಕೆಗಳನ್ನು ಎದುರಿಸಬೇಕಾಯಿತು. ಕ್ಷಮೆಯಾಚಿಸಲು ಒತ್ತಾಯ ಹೆಚ್ಚಾಯಿತು.
ಹಲವಾರು ಮಂದಿ ಸಿನಿಮಾ ರಸಿಕರು ನೇರವಾಗಿ ಆಸ್ಪತ್ರೆಯ ಅಧಿಕಾರಿಗಳಿಗೆ ಕರೆ ಮಾಡಿ ತಮ್ಮ ಸಿಟ್ಟನ್ನು ತೋಡಿಕೊಂಡಿದ್ದಾರೆ. ಟಿ ಸುನಿಲ್ ಅವರು ಇದು ಅಜ್ಞಾನದಿಂದ ಆದ ತಪ್ಪು ಎಂದು ತಿಳಿಸಿದ್ದಾರೆ. ಆಸ್ಪತ್ರೆ ಮಂಡಳಿ ಸೋಮವಾರ ಈ ತಪ್ಪಿಗೆ ಕ್ಷಮೆಯಾಚಿಸಿದೆ.
ಈ ಚಿತ್ರವನ್ನು ಅಂತರ್ಜಾಲದಿಂದ ಶನಿವಾರ ತೆಗೆಯಲಾಗಿದೆ. ಫೇಸ್ಬುಕ್ ನಲ್ಲಿ ಕ್ಷಮೆಯಾಚಿಸಿದೆ.
ಶ್ರೇಷ್ಠ ನಟನ ಮಾನಹಾನಿ ಮಾಡುವ ಉದ್ದೇಶವಿಲ್ಲ ಎಂದು ಸುನೀಲ್ ಹೇಳಿದ್ದಾರೆ.