ಇಂದು ಕೇಂದ್ರ ಬಜೆಟ್ ಮಂಡನೆ| ನಿರೀಕ್ಷೆಯ ಕ್ಷಣಗಳು

Share the Article

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಸರಕಾರದ ಮೂರನೇ ವರ್ಷದ ನಾಲ್ಕನೇ ಬಜೆಟ್ ನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುತ್ತಿದ್ದು, ರಾಜ್ಯದಿಂದ ಆಯ್ಕೆಯಾಗಿರುವ ಕಾರಣದಿಂದ ಕರ್ನಾಟಕದ ಜನತೆ ಹಾಗೂ ಪಕ್ಷ ಸಾಕಷ್ಟು ‌ನಿರೀಕ್ಷೆ ಇಟ್ಟುಕೊಂಡಿದೆ.

ರಾಜ್ಯಕ್ಕೆ ಏನು ಸಿಗಲಿದೆ ಎನ್ನುವ ಕುತೂಹಲ ಎಲ್ಲರಲ್ಲಿದೆ.

ಕೊರೊನಾದಿಂದ ಉಂಟಾಗಿರುವ ಹೊಸ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಬಜೆಟ್ ಮಂಡನೆ ಆಗಲಿದೆ. ಪಂಚ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇದರ ಪ್ರಭಾವ ಕೂಡಾ ಬಜೆಟ್ ನಲ್ಲಿ ಇರುತ್ತದೆಯೋ ನೋಡಬೇಕಾಗಿದೆ.

ಕೇಂದ್ರ ಸರಕಾರದ 2022-23 ನೇ ಸಾಲಿನ ಬಜೆಟ್ ಮಂಡನೆ ಇಂದು ಬೆಳಿಗ್ಗೆ 11 ಗಂಟೆಗೆ ಸಂಸತ್ ನಲ್ಲಿ ಮಂಡನೆಯಾಗಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಲಿದ್ದಾರೆ.

Leave A Reply