2022 ರಲ್ಲೇ ದೇಶದಲ್ಲಿ 5 ಜಿ ಸೇವೆ ಆರಂಭ !!! ನಿರ್ಮಲಾ ಸೀತಾರಾಮನ್
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2022-23 ಮೇ ಸಾಲಿನ ಬಜೆಟ್ ಮಂಡಿಸುತ್ತಿದ್ದು, ಪ್ರತಿ ಹಳ್ಳಿಗಳಲ್ಲಿ ಅಪ್ಟಿಕಲ್ ಫೈಬಲ್ ಕೇಬಲ್ ಆರಂಭವಾಗಲಿದ್ದು, ಒನ್ ನೇಷನ್ ಒನ್ ರಿಜಿಸ್ಟ್ರೇಶನ್ ( ಒಂದು ದೇಶ, ಒಂದು ನೋಂದಣಿ) ವ್ಯವಸ್ಥೆ ಮಾಡಲಾಗುವುದು. ಆಸ್ತಿ ನೋಂದಣಿ ಇನ್ನು ಮುಂದೆ ಡಿಜಟಲೀಕರಣ ಮಾಡಲಾಗುವುದು ಎಂದು ಘೋಷಿಸಿದ್ದಾರೆ. 2022 ರಲ್ಲೇ ದೇಶದಲ್ಲಿ 5 ಜಿ ಸೇವೆ ಆರಂಭವಾಗಲಿದೆ ಎಂದಿದ್ದಾರೆ.
75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕ್ ಸ್ಥಾಪನೆ, ಗ್ರಾಮ ಸೌಕರ್ಯ, ಅಭಿವೃದ್ಧಿ ಆರ್ಥಿಕ ನೆರವು, ಎಲ್ಲಾ ಪೋಸ್ಟ್ ಆಫೀಸ್ ಗಳಲ್ಲೂ ಬ್ಯಾಂಕಿಂಗ್ ವ್ಯವಸ್ಥೆ ಮಾಡಲಾಗುವುದು ಎಂಬುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.