ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ಆಡಿಯೋ ವೈರಲ್| ಎಂ ಪಿ ಚುನಾವಣೆಗೆ 30 ಕೋಟಿ ಖರ್ಚು| ಮಾದೇಗೌಡ ವಿರುದ್ಧ ಅವಹೇಳನಕಾರಿ ಮಾತು

ಎಲ್ ಆರ್ ಶಿವರಾಮೇಗೌಡ ಅವರು ಮಾತಾಡಿದ್ದಂತಹ ಉಪಚುನಾವಣೆ ಗೆಲ್ಲಲು ನಾನು 30 ಕೋಟಿ ರೂಪಾಯಿ ಖರ್ಚು ಮಾಡಿದ್ದೆ ಎಂಬ ಆಡಿಯೋ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಜೆಡಿಎಸ್ ಕಾರ್ಯಕರ್ತೆ ಒಬ್ಬರಲ್ಲಿ ದೂರವಾಣಿ ಸಂಭಾಷಣೆ ಮೂಲಕ ನಡೆದ ಈ ಆಡಿಯೋದಲ್ಲಿ ಮಹಿಳೆಯ ಧ್ವನಿ ಇದ್ದು, ‘ ಎಂ ಎಲ್ ಸಿ ಚುನಾವಣೆಗೆ 27 ಕೋಟಿ ರೂಪಾಯಿ ಖರ್ಚು ಮಾಡಿದ್ದೆ. ಐದು ತಿಂಗಳಿಗೆ ಎಂಪಿ ಚುನಾವಣೆಗಾಗಿ 30 ಕೋಟಿ ಖರ್ಚು ಮಾಡಿದ್ದೆ. ಮುಂದಿನ ನಾಗಮಂಗಲ ವಿಧಾನಸಭೆ ಚುನಾ 30 ಕೋಟಿ ಖರ್ಚು ಮಾಡುತ್ತೇನೆ’ ಎಂದು ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ಅವರು ಮಾತನಾಡಿದ್ದಾರೆ. ಈ ಆಡಿಯೋದಲ್ಲಿ ಸುಮಾತ 37 ನಿಮಿಷ 57 ಸೆಕೆಂಡ್ ಸಂಭಾಷಣೆ ಇದೆ. ಇನ್ನೂ ಮುಂದುವರಿದು, ‘ ನನ್ನದು 8 ಸ್ಕೂಲ್ ಇದೆ. ತಿಂಗಳಿಗೆ 3 ಕೋಟಿ ಸಂಬಳ ಕೊಡುತ್ತೇನೆ. ಮುಂದಿನ ನಾಗಮಂಗಲ ವಿಧಾನಸಭಾ ಚುನಾವಣೆಗೆ 10 ತಿಂಗಳ‌ ಸಂಬಳದಷ್ಟೇ ಹಣಬೇಕು. ಅಷ್ಟು ಹಣವಯ ಖರ್ಚು ಮಾಡುತ್ತೇನೆ. ತಮಗೆ ಬೆಂಬಲ‌ ನೀಡಬೇಕು’ ಎಂದು ಮಹಿಳಾ ಕಾರ್ಯಕರ್ತೆ ಜೊತೆ ಮಾತನಾಡಿದ್ದಾರೆ‌.

ನಾಗಮಂಗಲ ಕ್ಷೇತ್ರದ ಕೊಪ್ಪಗೆ ಕಳೆದ ಮೂರು ದಿನಗಳ‌ ಹಿಂದಷ್ಟೇ ಭೇಟಿ ನೀಡಿದ್ದ ಎಲ್ ಆರ್ ಶಿವರಾಮೇಗೌಡ, ಅಲ್ಲಿನ ಸಭೆಗೆ ಮಹಿಳಾ‌ ಕಾರ್ಯಕರ್ತೆಗೆ ಆಹ್ವಾನಿಸಲು ಕರೆ ಮಾಡಿದ್ದಾರೆ ಎಂಬ ಬಗ್ಗೆ ಮಾಹಿತಿ ಹೇಳಲಾಗಿದೆ.

ಈ ಆಡಿಯೋದಲ್ಲಿ ಇಷ್ಟು ಮಾತ್ರವಲ್ಲದೇ ನಾಗಮಂಗಲದ ಜೆಡಿಎಸ್ ಶಾಸಕರ ವಿರುದ್ಧವೂ ಚರ್ಚೆ ಮಾಡಿದ್ದಾರೆ. ‘ ನಾನು ಎರಡು ಸಲ ಎಂಎಲ್ ಎ ಆಗಿದ್ದೇನೆ. ಆತ ಮಾಡಿದ ಕೆಲಸಕ್ಕಿಂತ ತಾತನಂತ ಕೆಲಸ ನಾನು ಮಾಡಿದ್ದೇನೆ. ಸುರೇಶ್ ಗೌಡ ನನಗೆ ಕಳೆದ ಲೋಕಸಭೆ ಟಿಕೆಟ್ ತಪ್ಪಿಸಿದ್ದ. ನಿಖಿಲ್ ಕುಮಾರ್ ಸ್ವಾಮಿ ಚುನಾವಣೆಗೆ ನಿಲ್ಲಿಸಿ ಅವರ ಮನೆಗೂ ಕಂಟಕ ತಂದರು. ನನಗೂ ಕಂಟಕ ತಂದರು. ಮುಂದಿನ ಬಾರಿ ಚುನಾವಣೆಗೆ ನಾನು ನಿಂತುಕೊಳ್ಳುತ್ತೇನೆ. ನನಗೆ ಬೆಂಬಲಿಸಿ’ ಎಂದು ಹೇಳಿದ್ದಾರೆ.

‘ ಐದು ಬಾರಿ ಕಾಂಗ್ರೆಸ್ ನಿಂದ ನಿಂತು ಸೋತಿದ್ದೇನೆ. ಎಲ್ಲವೂ ಕಡಿಮೆ ಅಂತರದಿಂದ ಸೋತಿದ್ದು‌. ಜಿ ಮಾದೇಗೌಡರಿಗೆ ಎಕ್ಕಡದಲ್ಲಿ ಹೊಡೆದಿದ್ದೆ. ಜಿ ಮಾದೇಗೌಡರ ವಿರೋಧದಿಂದ ಸೋತೆ” ಎಂದು ಮಾಜಿ ಸಂಸದ ಜಿ ಮಾದೇಗೌಡರ ಬಗ್ಗೆಯೂ ಮಹಿಳಾ ಜೆಡಿಎಸ್ ಕಾರ್ಯಕರ್ತೆ ಜೊತೆ ಮಾತನಾಡಿದ ಆಡಿಯೋ‌ನಲ್ಲಿ ರೆಕಾರ್ಡ್ ಆಗಿದೆ. ಆದರೆ ನಾಗಮಂಗಲ ಎಂಎಲ್ ಎ ಸುರೇಶ್ ಗೌಡ ಪರವಾಗಿ ಮಹಿಳಾ ಜೆಡಿಎಸ್ ಕಾರ್ಯಕರ್ತೆ ಮಾತನಾಡಿದ್ದಾರೆ.

Leave A Reply

Your email address will not be published.