ಮೈದುನನೊಂದಿಗೆ ವಿಧವೆ ಅತ್ತಿಗೆಯ ಲವ್ವಿ-ಡವ್ವಿ!! ವಿಚಾರ ತಿಳಿಯುತ್ತಿದ್ದಂತೆ ಇಬ್ಬರಿಗೂ ನಡೆಯಿತು ಮದುವೆ
ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಸೇರಿ ವಿಧವೆ ಅತ್ತಿಗೆಯ ಜೊತೆಗೆ ಮೈದುನನಿಗೆ ಮದುವೆ ಮಾಡಿಸಿದ ಘಟನೆಯೊಂದು ಬಿಹಾರದ ದರ್ಬಾಂಗ್ ಜಿಲ್ಲೆಯಿಂದ ವರದಿಯಾಗಿದೆ.
ವಿಧವೆ ಮಹಿಳೆಯ ಪತಿ ಕೆಲ ಸಮಯದ ಹಿಂದೆ ಮೃತಪಟ್ಟ ಬಳಿಕ ಮೈದುನನೊಂದಿಗೆ ಮಹಿಳೆಗೆ ಅನೈತಿಕ ಸಂಬಂಧವಿತ್ತು. ಈ ವಿಚಾರ ಗ್ರಾಮಸ್ಥರ ಕಿವಿಗೆ ಬಿದ್ದಿದ್ದು, ವಿಧವೆ ಅತ್ತಿಗೆ ಹಾಗೂ ಮೈದುನ ಸಲ್ಲಾಪದಲ್ಲಿ ತಲ್ಲೀನರಾಗಿರುವಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಕೂಡಲೇ ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಸೇರಿ ಮೈದುನನಿಗೆ ಅತ್ತಿಗೆಯ ಜೊತೆ ವಿವಾಹ ಕಾರ್ಯ ನೆರವೇರಿಸಿದ್ದಾರೆ.