ಮಹೀಂದ್ರಾ ಕಂಪನಿಯಲ್ಲಿ ನಡೆದ ರೈತನ ಅವಮಾನ ಪ್ರಕರಣ ಸುಖಾಂತ್ಯ: ರೈತನಿಗೆ ಮಹೀಂದ್ರಾ ಗಾಡಿ ಡೆಲಿವರಿ

ತುಮಕೂರಿನಲ್ಲಿ ಕಳೆದ ವಾರ ಗೂಡ್ಸ್ ವಾಹನ ಖರೀದಿಗೆಂದು ಹೋದ ರೈತನಿಗೆ ಅವಮಾನ ಮಾಡಿದ ಮಹೀಂದ್ರಾ ಕಂಪನಿ ಈಗ ರೈತನಿಗೆ ನೆನ್ನೆ ಗೂಡ್ಸ್ ವಾಹನವನ್ನು ಡೆಲಿವರಿ ಮಾಡಿದ್ದಾರೆ.

 

ತುಮಕೂರು ಜಿಲ್ಲೆಯ ಹೆಬ್ಬೂರು ಹೋಬಳಿಯ ರಾಮನ ಪಾಳ್ಯದ ಐದಾರು ಜನ ಸ್ನೇಹಿತರ ಜೊತೆ ಕೆಂಪೇಗೌಡ ತುಮಕೂರು ನಗರದ ಗುಬ್ಬಿ ಗೇಟ್ ಬಳಿ ಇರುವ ಮಹೀಂದ್ರಾ ಶೋರೂಂಗೆ ಗೂಡ್ಸ್ ವಾಹನ ಖರೀದಿ ಮಾಡಲು ಹೋದಾಗ, ಅಲ್ಲಿನ ಸಿಬ್ಬಂದಿ ಇವರ ವೇಷಭೂಷಣ ಕಂಡು ನಿಮಗೆ ವಾಹನ ಕೊಳ್ಳಲು ಯೋಗ್ಯತೆ ಇಲ್ಲ ಎಂದು ಹೀಯಾಳಿಸಿದಕ್ಕೆ ಪ್ರತಿಯಾಗಿ ಅರ್ಧ ಗಂಟೆಯಲ್ಲಿ 10 ಲಕ್ಷ ರೂ. ತೆಗೆದುಕೊಂಡು ಬಂದು ಮಹೀಂದ್ರಾ ಶೋರೂಂ ಗೆ ಬಂದಿದ್ದಾರೆ. ಇದನ್ನು ಕಂಡು ತಬ್ಬಿಬ್ಬಾದ ಶೋರೂಂ ಸಿಬ್ಬಂದಿ‌ 4 ದಿವಸದಲ್ಲಿ ಗಾಡಿ ಕೊಡೋದಾಗಿ ಹೇಳಿದಾಗ, ಒಪ್ಪದ ಕೆಂಪೇಗೌಡ ಅವರು ಈಗಲೇ ಗಾಡಿ ಬೇಕೆಂದು ಹೇಳಿದಾಗ, ಸಿಬ್ಬಂದಿಗಳು ತಬ್ಬಿಬ್ಬಾಗುತ್ತಾರೆ. ಅನಂತರ ಈ ಪ್ರಕರಣ ಪೊಲೀಸ್ ಮೆಟ್ಟಿಲೇರುತ್ತೆ. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು.

ಈಗ ಈ ಪ್ರಕರಣ ಸುಖಾಂತ್ಯ ಕಂಡಿದ್ದು, ಕೊನೆಗೂ ಮಹೀಂದ್ರಾ ಗೂಡ್ಸ್ ವಾಹನವನ್ನು ರೈತ ಕೆಂಪೇಗೌಡ ಅವರು ಖರೀದಿಸಿದ್ದಾರೆ.

Leave A Reply

Your email address will not be published.