ವಿದ್ಯಾರ್ಥಿನಿಯನ್ನು ಕಾಮತೃಷೆಗೆ ಬಳಸಿಕೊಂಡ ಶಿಕ್ಷಕನ ಪ್ರಕರಣ : ಕೆಲಸದಿಂದ ಖಾಯಂ ವಜಾಗೊಳಿಸಿದ ಶಾಲಾ ಆಡಳಿತ ಮಂಡಳಿ
ಮೈಸೂರು : ಹೆಚ್ ಡಿ ಕೋಟೆ ತಾಲೂಕಿನ ಶಾಲೆಯಲ್ಲಿ ವಿದ್ಯಾರ್ಥಿನಿ ಜೊತೆ ಮುಖ್ಯ ಶಿಕ್ಷಕ ಅಸಭ್ಯ ರೀತಿಯಲ್ಲಿ ವರ್ತನೆ ಮಾಡುತ್ತಿರುವ ವೀಡಿಯೋ ಇತ್ತೀಚೆಗಷ್ಟೇ ವೈರಲ್ ಆಗಿತ್ತು. ಈಗ ಈ ಕಾಮುಕ ಶಿಕ್ಷಕನ ವಿರುದ್ಧ ಖಾಸಗಿ ಶಾಲಾ ಆಡಳಿತ ಮಂಡಳಿ ತುರ್ತು ಸಭೆಯಲ್ಲಿ ಮುಖ್ಯ ಶಿಕ್ಷಕನನ್ನು ಸೇವೆಯಿಂದಲೇ ಖಾಯಂ ವಜಾಗೊಳಿಸಲು ನಿರ್ಧರಿಸಿದ್ದಾರೆ.
ಮುಖ್ಯ ಶಿಕ್ಷಕ ಆರ್ ಎಂ ಅನಿಲ್ ಕುಮಾರ್ ವಜಾಗೊಂಡ ಶಿಕ್ಷಕ. ಈ ಶಿಕ್ಷಕ ಶಾಲೆಯೊಂದರ ಕೊಠಡಿಯೊಳಗೆ ತಬ್ಬಿಕೊಂಡು ಮುದ್ದಾಡುತ್ತಿದ್ದ ದೃಶ್ಯ ಹೊರಗಿನಿಂದ ಕಿಟಕಿ ಬಳಿ ನಿಂತು ಕೆಲ ವಿದ್ಯಾರ್ಥಿಗಳು ವೀಡಿಯೋ ಮಾಡಿದ್ದರು.
ಈ ವೀಡಿಯೋ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಬಿಇಒ ಚಂದ್ರಕಾಂತ್ ಮತ್ತು ಡಿಡಿಪಿಐ ರಾಮಚಂದ್ರರಾಜೇ ಅರಸ್ ತಿಳಿಸಿದ್ದರು. ಫೋಕ್ಸೋ ಪ್ರಕರಣ ಕೂಡಾ ದಾಖಲಾಗಿದೆ ಈ ಶಿಕ್ಷಕನ ಮೇಲೆ.