ಪಬ್ ಜಿ ಆಡುವುದನ್ನು ನಿಲ್ಲಿಸಲು ಬುದ್ಧಿ ಹೇಳಿದ್ದೇ ಸೇಡಿಗೆ ಕಾರಣವಾಯಿತು!! ರಾತ್ರಿ ಬೆಳಗಾಗುವುದರೊಳಗೆ ಮೂವರ ಹೆಣ ಬಿದ್ದಿತ್ತು
ಲಾಹೋರ್: ಪಬ್ ಜಿ ಆಡುವುದನ್ನು ನಿಲ್ಲಿಸಲು ತಿಳಿಸಿ, ಬುದ್ಧಿ ಮಾತು ಹೇಳಿದ ತಾಯಿಯ ಮೇಲೆಯೇ ಬಾಲಕನೊಬ್ಬ ಕ್ರೌರ್ಯಮೆರೆದಿದ್ದು, ತಾಯಿ ಸೇರಿ ಮೂವರು ಮಕ್ಕಳು ಬಲಿಯಾದ ಘಟನೆ ಲಾಹೋರ್ ನಲ್ಲಿ ನಡೆದಿದೆ.
ಮೃತರನ್ನು ತಾಯಿ ನಹೀಬ್ ಮುಬಾರಕ್,ಮಕ್ಕಳಾದ ತೈಮೂರ್ ಹಾಗೂ ಇಬ್ಬರು ಹೆಣ್ಣು ಮಕ್ಕಳು.
ದಿನವಿಡೀ ಪಬ್ ಜೀ ಆಟದಲ್ಲಿ ತೊಡಗುತ್ತಿದ್ದ ಮಗನಿಗೆ ತಾಯಿ ನಹೀಬ್ ಬೈದರೆಂಬ ಕಾರಣಕ್ಕೆ ಕೋಪಗೊಂಡ ಬಾಲಕ ತಾಯಿ, ಅಣ್ಣ, ಅಕ್ಕ ಮತ್ತು ತಂಗಿಗೆ ರಾತ್ರಿ ಮಲಗಿದಲ್ಲೆಗೇ ಪಿಸ್ತುಲ್ ನಿಂದ ಗುಂಡು ಹಾರಿಸಿ ಕೊಲೆನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.