ಮೆಲ್ಕಾರ್: ಯುವಕನಿಗೆ ಚೂರಿ ಇರಿತ-ನಗರ ಠಾಣೆಯಲ್ಲಿ ಪ್ರಕರಣ ದಾಖಲು

ಬಂಟ್ವಾಳ: ಅಂಗಡಿ ಮಾಲೀಕ ಯುವಕನೋರ್ವನಿಗೆ ಚೂರಿಯಿಂದ ಇರಿದು ಗಾಯಗೊಳಿಸಿರುವ ಘಟನೆಯ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಗಾಯಗೊಂಡ ಯುವಕನನ್ನು ಸದಕತುಲ್ಲ(35) ಎಂದು ಗುರುತಿಸಲಾಗಿದ್ದು,ಯುವಕನು ಮೆಲ್ಕಾರ್ ಎಂಬಲ್ಲಿ ಕಮರ್ಷಿಯಲ್ ಕಾಂಪ್ಲೆಕ್ಸ್ ಒಂದರಲ್ಲಿ ಬಟ್ಟೆ ಅಂಗಡಿ ನಡೆಸುತ್ತಿದ್ದು,ಈ ಅಂಗಡಿಯನ್ನು ಕೆಲ ವರ್ಷಗಳ ಹಿಂದೆ ನಿಸಾರ್ ಅಹಮದ್ ಎಂಬವರಿಂದ ಬಾಡಿಗೆಗೆ ಪಡೆದುಕೊಂಡಿದ್ದರು.

ನಿನ್ನೆ ಯುವಕ ಅಂಗಡಿ ತೆರೆಯುತ್ತಿರುವಾಗ ಏಕಾಏಕಿ ಪ್ರವೇಶಿಸಿದ ನಿಸಾರ್, ಅಂಗಡಿಯನ್ನು ತೆರೆಯಲು ತಡಯಾಕೆ ಎಂದು ಪ್ರಶ್ನಿಸಿದಲ್ಲದೇ ಹರಿತವಾದ ಚೂರಿಯಿಂದ ಇರಿದಿದ್ದಾರೆ.

ಸದ್ಯ ಯುವಕ ಗಾಯಗೊಂಡಿದ್ದು,ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.