ಮಂಗಳೂರು: ಪ್ರೀತಿಯಲ್ಲಿ ಮನಸ್ತಾಪ, ಮಾತುಕತೆಗೆಂದು ಬೀಚ್ ಬಳಿ ತೆರಳಿದ್ದಾಗ ನಡೆಯಿತು ದುರ್ಘಟನೆ!! ಮಾತಿಗೆ ಮಾತು ಬೆಳೆದು ನೀರಿಗೆ ಹಾರಿದ ಯುವತಿ-ರಕ್ಷಿಸಲು ತೆರಳಿದ ಯುವಕ ನೀರು ಪಾಲು

Share the Article

ಸಮುದ್ರಕ್ಕೆ ಹಾರಿದ ಗೆಳತಿಯನ್ನು ರಕ್ಷಿಸಲು ನೀರಿಗೆ ಹಾರಿದ ಯುವಕನೋರ್ವ ಮೃತಪಟ್ಟು, ಯುವತಿ ಪಾರಾದ ಘಟನೆ ಮಂಗಳೂರಿನ ಉಳ್ಳಾಲ ಸಮೀಪದ ಸೋಮೇಶ್ವರ ಕಡಲ ಕಿನಾರೆಯಲ್ಲಿ ನಡೆದಿದೆ. ಸಮುದ್ರ ಪಾಲಾದ ಯುವಕನನ್ನು ಸೋಮೇಶ್ವರ ಸಮೀಪದ ಲಾಯ್ಡ್ ಡಿಸೋಜ ಎಂದು ಗುರುತಿಸಲಾಗಿದೆ.

ಘಟನೆ ವಿವರ:ಯುವಕ ಹಾಗೂ ಆತನ ಗೆಳತಿ ಅಶ್ವಿತಾ ಫೆರಾವೋ ಪರಸ್ಪರ ಪ್ರೀತಿಸುತ್ತಿದ್ದೂ, ಕಳೆದ ಕೆಲ ದಿನಗಳ ಹಿಂದೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ಈ ಸಂಬಂಧ ಮಾತುಕತೆಗೆಂದು ಇಬ್ಬರೂ ಸೋಮೇಶ್ವರ ಬೀಚ್ ಬಳಿ ತೆರಳಿದ್ದಾರೆ.

ಈ ವೇಳೆಯಲ್ಲಿ ಮಾತಿಗೆ ಮಾತು ಬೆಳೆದು ಯುವತಿ ಅಶ್ವಿತಾ ಸಮುದ್ರಕ್ಕೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಆಕೆಯ ರಕ್ಷಣೆಗೆ ಯುವಕನೂ ನೀರಿಗೆ ಜಿಗಿದಿದ್ದು, ಈ ವೇಳೆ ಸ್ಥಳೀಯ ಜೀವ ರಕ್ಷಕ ದಳದ ಸಿಬ್ಬಂದಿಗಳು ಯುವತಿಯನ್ನು ರಕ್ಷಿಸಿದ್ದು ಯುವಕ ನೀರು ಪಾಲಾಗಿದ್ದಾರೆ.

Leave A Reply