ಬಿ.ಎಸ್.ವೈ ಮೊಮ್ಮಗಳ ಆತ್ಮಹತ್ಯೆ ಪ್ರಕರಣ : ಮರಣೋತ್ತರ ವರದಿಯಲ್ಲೇನಿದೆ ? ವೈದ್ಯರ ಹೇಳಿಕೆ ಏನು ? ಇಲ್ಲಿದೆ ಮಾಹಿತಿ

Share the Article

ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಮೊಮ್ಮಗಳು ಡಾ.ಸೌಂದರ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣೋತ್ತರ ಪರೀಕ್ಷೆ ಮುಕ್ತಾಯಗೊಂಡಿದೆ. ಹಾಗೂ ವೈದ್ಯರು ಅಧಿಕಾರಿಗಳಿಗೆ ಮರಣೋತ್ತರ ಪರೀಕ್ಷೆ ವರದಿ ಹಸ್ತಾಂತರಿಸಿದ್ದಾರೆ.

ಡಾ.ಸೌಂದರ್ಯ ಅವರ ಮರಣೋತ್ತರ ಪರೀಕ್ಷೆ ಬೌರಿಂಗ್ ಆಸ್ಪತ್ರೆಯಲ್ಲಿ ಮುಗಿದಿದ್ದು, ಮೂವರು ವೈದ್ಯರು ಹಾಗೂ ತಹಶೀಲ್ದಾರ್ ಸಮ್ಮುಖದಲ್ಲಿ ಪೋಸ್ಟ್ ಮಾರ್ಟಮ್ ಮಾಡಲಾಗಿದೆ.

ಡಾ.ಸತೀಶ್ ಅವರು ಪೋಸ್ಟ್ ಮಾರ್ಟಮ್ ರಿಪೋರ್ಟ್ ನ್ನು ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಮೇಲ್ನೋಟಕ್ಕೆ ಡಾ.ಸೌಂದರ್ಯ ಅವರ ಕುತ್ತಿಗೆ ಭಾಗದಲ್ಲಿ ಮಾತ್ರ ಮಾರ್ಕ್ ಇದೆ. ಮರಣೋತ್ತರ ಪರೀಕ್ಷಾ ವರದಿಯನ್ನು ಬೆಂಗಳೂರು ಉತ್ತರ ಭಾಗದ ತಹಶೀಲ್ದಾರ್ ಅವರಿಗೆ ಹಸ್ತಾಂತರಿಸಲಾಗಿದೆ.

Leave A Reply