ಸರಕಾರಿ ಕಚೇರಿಗಳು ವಾರಾಂತ್ಯದಲ್ಲಿ ಕೂಡ ಕಾರ್ಯ ನಿರ್ವಹಿಸಲು ಸೂಚನೆ|
5 ದಿನ ಕಚೇರಿ ನಿರ್ವಹಣೆ ಆದೇಶ ವಾಪಾಸ್ ಪಡೆದ ಸರಕಾರ |
ಬೆಂಗಳೂರು : ಸರಕಾರಿ ಕಚೇರಿಗಳು ವಾರಾಂತ್ಯದಲ್ಲಿ ಕೂಡಾ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಲಾಗಿದೆ. ವಾರಾಂತ್ಯದಲ್ಲಿ ಕಚೇರಿಗಳು ಕಾರ್ಯ ನಿರ್ವಹಿಸುವಂತೆ ಸರಕಾರದಿಂದ ಸೂಚನೆ ನೀಡಲಾಗಿದೆ. 5 ದಿನಗಳ ಕಾಲ ಕಾರ್ಯ ನಿರ್ವಹಿಸಬೇಕು ಎಂಬ ಹಿಂದಿನ ಆದೇಶ ರಾಜ್ಯ ಸರಕಾರ ವಾಪಸ್ ಹಿಂಪಡೆದುಕೊಂಡಿದೆ.
ಕೊರೊನಾ ತೀವ್ರ ಏರಿಕೆ ಹಿನ್ನೆಲೆಯಲ್ಲಿ ವಾರಾಂತ್ಯ ಕರ್ಫ್ಯೂ ಜಾರಿ ಮಾಡಿದ್ದರಿಂದ 5 ದಿನ ಮಾತ್ರ ಕಚೇರಿ ನಿರ್ವಹಣೆಗೆ ಆದೇಶ ನೀಡಲಾಗಿತ್ತು. ಈ ಕುರಿತಂತೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಸ್ಪಷ್ಟೀಕರಣ ಆದೇಶ ಹೊರಡಿಸಿದ್ದು, ರಾಜ್ಯದಲ್ಲಿ ಕೋವಿಡ್ -19 ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ದಿನಾಂಕ 04-01-2022 ರಂದು ಎಲ್ಲಾ ಕಚೇರಿಗಳು ವಾರದಲ್ಲಿ ಐದು ದಿನ ಸೋಮವಾರದಿಂದ ಶುಕ್ರವಾರದವರೆಗೆ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿತ್ತು. ಈ ಆದೇಶವನ್ನು ಹಿಂಪಡೆಯಲಾಗಿದೆ. ವಾರಾಂತ್ಯದಲ್ಲಿ ಎಲ್ಲಾ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸುವಂತೆ ಸೂಚಿಸಿದ್ದಾರೆ. ಈ ಮೂಲಕ ವಾರದ 6 ದಿನ ಕೆಲಸ ನಿರ್ವಹಿಸೋದಕ್ಕೆ ತಿಳಿಸಲಾಗಿದೆ.