ರಾಷ್ಟೀಯ ಬಾಲ ಪುರಸ್ಕಾರ ಮುಡಿಗೇರಿಸಿಕೊಂಡ ಕರಾವಳಿಯ ಬಾಲಕಿ ರೆಮೊನಾ|ನರೇಂದ್ರ ಮೋದಿ ಜೊತೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತಾಡಿದ ಪ್ರತಿಭಾವಂತ ಬೆಡಗಿ |32 ಮಕ್ಕಳ ಪೈಕಿ ಈಕೆಯ ಪಾಲಿಗೆ ದಕ್ಕಿದೆ ಮೋದಿಯೊಂದಿಗೆ ಮಾತುಕತೆ
ಕರ್ನಾಟಕದ ಕರಾವಳಿಯ ಬಾಲಕಿಗೆ ಕೇಂದ್ರ ಸರಕಾರ ನೀಡುವ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರವು ಲಭಿಸಿದ್ದು, ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಜೊತೆ ವೀಡಿಯೋ ಕಾನ್ಫರೆನ್ಸ್ ನಲ್ಲಿ ಈ ಬಾಲಕಿಗೆ ಮಾತನಾಡುವ ಅವಕಾಶ ದೊರೆತಿದೆ.
ಕರ್ನಾಟಕದವರ ಪೈಕಿ ಮೋದಿ ಜೊತೆ ಮಾತನಾಡುವ ಅವಕಾಶ ಈ ಬಾಲಕಿಗೆ ಮಾತ್ರ ದೊರಕಿದೆ. ದೇಶದಲ್ಲಿ ಒಟ್ಟು 32 ಮಕ್ಕಳು ಈ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಇಂದು ಮಂಗಳೂರಿನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಜೊತೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಾಧಕಿ ಪ್ರಶಸ್ತಿ ಸ್ವೀಕರಿಸಿದ್ದಾಳೆ. 13 ವರ್ಷದ ಸಾಧನೆ, ಅದಕ್ಕೆ ಎದುರಾದ ಕಷ್ಟ, ಭವಿಷ್ಯದ ಪ್ಲಾನ್ ಬಗ್ಗೆ ಪ್ರಧಾನಿ ಕೇಳಿದ ಪ್ರಶ್ನೆಗೆ ನಿರರ್ಗಳವಾಗಿ ಉತ್ತರಿಸಿದ್ದಾಳೆ.
ರೆಮೊನಾ ಸಾಧನೆ : ಗಾಜಿನ ಚೂರುಗಳ ಮೇಲೆ ಡ್ಯಾನ್ಸ್ ಮಾಡಬಲ್ಲಳು ಈಕೆ. ತಲೆ ಮೇಲೆ ಬೆಂಕಿಯನ್ನಿರಿಸಿಕೊಂಡು ಸ್ಟೆಪ್ ಹಾಕುವ ಪ್ರತಿಭಾವಂತ ಬೆಡಗಿ ಈಕೆ. ಭರತನಾಟ್ಯ ಸೇರಿದಂತೆ ಹಲವಾರು ನೃತ್ಯ ಪ್ರಕಾರಗಳಲ್ಲಿ ಸಾಧನೆ ಮಾಡಿರುವ ಕೀರ್ತಿ 17 ವರ್ಷದ ರೆಮೊನಾ ಇವೆಟ್ಟೆ ಪೆರೇರಿಯಾಗೆ ಸಲ್ಲುತ್ತದೆ.
ಇವರ ಸಾಧನೆಗೆ ಹಲವಾರು ಪ್ರಶಸ್ತಿಗಳು ಇವರನ್ನು ಹುಡುಕಿಕೊಂಡು ಬಂದಿವೆ. 2017 ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, 2021 ರಲ್ಲಿ ಬಾಲ ಗೌರವ ಪ್ರಶಸ್ತಿ ಸೇರಿದಂತೆ ಇಂಡಿಯಾ ಬುಕ್ ಆಫ್ ರೆಕಾರ್ಡ್, ಭಾರತ್ ಬುಕ್ ಆಫ್ ರೆಕಾರ್ಡ್, ಗೋಲ್ಡನ್ ಬುಕ್ ಆಫ್ ವರ್ಡ್ ರೆಕಾರ್ಡ್ ಆಫ್ ಲಂಡನ್, ಮ್ಯಾಜಿಕ್ ಬುಕ್ ಆಫ್ ರೆಕಾರ್ಡ್ ಪಡೆದಿದ್ದಾರೆ.