ಉಸಿರು ಬಿಗಿ ಹಿಡಿದು ನೋಡುವಂತಿದೆ ಬೆಟ್ಟದ ಮೇಲೆ ಕಾರು ಚಾಲಕ ಮಾಡಿದ ಯೂಟರ್ನ್ ವಿಡಿಯೋ| ಲಕ್ಷಾಂತರ ಜನರು ವೀಕ್ಷಿಸಿದ ಈ ವಿಡಿಯೋದ ಅಸಲಿಯತ್ತು ಇಲ್ಲಿದೆ ನೋಡಿ!
ಇಂದಿನ ಯುಗ ಫಾಸ್ಟ್ ಟೆಕ್ನಾಲಜಿ ಅತ್ತ ಮುಖ ಮಾಡಿದೆ. ಅದೆಲ್ಲೋ ನಡೆದಿರೋ ವಿಷಯ, ವಿಡಿಯೋಗಳನ್ನು ಮನೆಯಿಂದಲೇ ನೋಡಿ ಆನಂದಿಸಬಹುದಾಗಿದೆ. ಇಂತಹ ಸೋಶಿಯಲ್ ಮೀಡಿಯಾಗಳಲ್ಲಿ ದಿನದಿಂದ ದಿನಕ್ಕೆ ವಿಭಿನ್ನವಾದ ಚಿತ್ರಣಗಳು ಹರಿದಾಡುತ್ತಲೇ ಇರುತ್ತದೆ. ಕೆಲವೊಂದು ಹಾಸ್ಯಮಯವಾಗಿದ್ದರೆ, ಇನ್ನೂ ಕೆಲವು ತಲೆಗೆ ಕೈ ಇಟ್ಟು ಕೂರುವುದು ಗ್ಯಾರಂಟಿ ಎಂಬಂತೆ. ಹೀಗೆ ಇತ್ತೀಚೆಗೆ ಹರಿದಾಡಿದ ಒಂದು ವಿಡಿಯೋ ನಿಜವಾಗಿಯೂ ವೀಕ್ಷಕರು ಹೃದಯವನ್ನೇ ಕೈಯಲ್ಲಿ ಹಿಡಿದು ನೋಡುವಹಾಗಿದೆ..
ಹೌದು. ಇಲ್ಲೊಂದು ಕಾರ್ ಡ್ರೈವರ್ ನ ಸಾಹಸಮಯ ದೃಶ್ಯ ವೈರಲ್ ಆಗಿದ್ದು, ನೋಡಿದಾಕ್ಷಣ ಎದೆ ಝಲ್ ಅನಿಸುತ್ತೆ. ಸಾಮಾನ್ಯವಾಗಿ ಡ್ರೈವರ್ ಎಂದಾಕ್ಷಣ ಚತುರತೆಯಿಂದ ಕೆಲಸ ಮಾಡುವವರಾಗಿರಬೇಕು. ಆದ್ರೆ ಈ ವಿಡಿಯೋದಲ್ಲಿ ಇರುವಾತ ಪೋರರಲ್ಲಿ ಪೋರರೆಂದೇ ಹೇಳಬಹುದು.ಆದರೆ,ಈ ವಿಡಿಯೋದ ಅಸಲಿಯತ್ತು ತಿಳಿದರೆ ನಿಮ್ಮ ಅಭಿಪ್ರಾಯ ಖಂಡಿತ ಬದಲಾಗುತ್ತದೆ.
ವೈರಲ್ ಆಗುತ್ತಿರುವ 1 ನಿಮಿಷ 22 ಸೆಕೆಂಡಿನ ಈ ಕ್ಲಿಪ್‌ನಲ್ಲಿ ಕಡಿದಾದ ರಸ್ತೆಯಲ್ಲಿ ಅಪಾಯಕಾರಿಯಾಗಿ ಡ್ರೈವರ್ ಕಾರು ತಿರುಗಿಸುವ ದೃಶ್ಯವಿದೆ. ಉಸಿರು ಬಿಗಿಹಿಡಿದು ನೋಡುವಂತೆ ಮಾಡುವ ದೃಶ್ಯ ಇದು. ಯಾಕೆಂದರೆ, ರಸ್ತೆಯ ಒಂದು ಭಾಗ ಬಹುದೊಡ್ಡ ಕಮರಿಯಂತೆ ಕಾಣುತ್ತದೆ.’ನಿಖರವಾದ 80 ಪಾಯಿಂಟ್ ತಿರುವು’ ಎಂದು ಕ್ಯಾಪ್ಶನ್ ಬರೆದು ಡಾ ಅಜಯಿತಾ ಎಂಬವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಈ ವಿಡಿಯೋ ನಿನ್ನೆಯಷ್ಟೇ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಆಗಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ. ಟ್ವಿಟರ್ನಲ್ಲಿ ಇದುವರೆಗೂ 1.8 ಮಿಲಿಯನ್ ವೀಕ್ಷಣೆ ಕಂಡಿದೆ. ಇನ್ಸ್ಟಾಗ್ರಾಂನಲ್ಲೂ ಸಹ ಲಕ್ಷಾಂತರ ವೀಕ್ಷಣೆ ಕಂಡಿದೆ. ಈಗಲೂ ಕೂಡ ಜಾಲತಾಣದಲ್ಲಿ ಈ ವಿಡಿಯೋ ಕುರಿತ ಚರ್ಚೆ ಜೋರಾಗಿದೆ ಮತ್ತು ಸಾಕಷ್ಟು ನೆಟ್ಟಿಗರು ಚಾಲಕನ ಸ್ಕಿಲ್ಗೆ ಫಿದಾ ಆಗಿ ಮೆಚ್ಚುಗೆಯ ಸುರಿಮಳೆಯನ್ನೇ ಹರಿಸಿದ್ದಾರೆ.
ಆದರೆ, ಈ ವಿಡಿಯೋ ಬಗ್ಗೆ ಹೆಚ್ಚು ತಿಳಿದಾಗ ಅದರ ಹಿಂದೆ ಇನ್ನೊಂದು ಸ್ಟೋರಿ ಇರುವುದು ಕಂಡುಬಂದಿದೆ. ಈ ವಿಡಿಯೋವನ್ನು ಕಳೆದ ಡಿಸೆಂಬರ್ನಲ್ಲೇ ಡ್ರೈವಿಂಗ್ ಸ್ಕಿಲ್ ಹೆಸರಿನ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಲಾಗಿದೆ. ವಿಡಿಯೋದಲ್ಲಿ ಕಡಿದಾದ ರಸ್ತೆಯಲ್ಲಿ ಹೇಗೆ ಯೂಟರ್ನ್ ತೆಗೆದುಕೊಳ್ಳಬೇಕೆಂದು ಪ್ರದರ್ಶನ ನೀಡುವ ಅದ್ಭುತ ಡ್ರೈವಿಂಗ್ ಸ್ಕಿಲ್ ಇರುವ ನಿಜ. ಸ್ವಲ್ಪ ಮಿಸ್ ಆದರೆ ಪ್ರಾಣ ಹೋಗುತ್ತೆ ಎಂದು ಅಂದುಕೊಳ್ಳುವುದು ನಿಜ.
ಆದರೆ, ಮೊತ್ತೊಂದು ಆಯಾಮದಲ್ಲಿ ವಿಡಿಯೋ ನೋಡಿದಾಗ ಅದರ ಸ್ಪಷ್ಟತೆ ಗೊತ್ತಾಗುತ್ತದೆ. ಮೊದಲು ಅಂದುಕೊಂಡಂತೆ ಕಾರಿನ ಹಿಂದೆ ಪಾತಾಳ ಇಲ್ಲ. ಕೆಳಗಡೆ ಮತ್ತೊಂದು ರಸ್ತೆ ಇರುವುದು ಇನ್ನೊಂದು ಆಯಾಮದ ವಿಡಿಯೋದಲ್ಲಿ ಸ್ಪಷ್ಟವಾಗುತ್ತದೆ. ಆದ್ರೆ ಒಮ್ಮೆ ವೈರಲ್ ಆದ ವಿಡಿಯೋ ನೋಡಿ ಎದೆ ‘ಝಲ್ ‘ಅನಿಸಿರಬೇಕಲ್ವಾ!?