ಬಜಗೋಳಿ: ಆಟೋ ಹಾಗೂ ಕಾರು ನಡುವೆ ಭೀಕರ ಅಪಘಾತ!! ಆಟೋ ಚಾಲಕ ಮೃತ್ಯು-ಇನ್ನೊರ್ವ ಗಂಭೀರ

Share the Article

ಬಜಗೋಳಿ: ರಾಷ್ಟೀಯ ಹೆದ್ದಾರಿಯ ಮಿಯ್ಯಾರು ಎಂಬಲ್ಲಿ ಆಟೋ ರಿಕ್ಷಾ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಓರ್ವ ಮೃತಮಟ್ಟು ಇನ್ನೊರ್ವ ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ಮೃತರನ್ನು ಆಟೋ ಚಾಲಕ ಚಂದ್ರಶೇಖರ್ ಮಡಿವಾಳ ಎಂದು ಗುರುತಿಸಲಾಗಿದ್ದು,ಗಾಯಗೊಂಡವರನ್ನು ದಿವಾಕರ್ ಮಡಿವಾಳ ಎಂದು ಗುರುತಿಸಲಾಗಿದೆ.

ಈರ್ವರೂ ಆಟೋ ರಿಕ್ಷಾದಲ್ಲಿ ಕಾರ್ಕಳದ ಆಸ್ಪತ್ರೆಗೆ ತೆರಳಿ ಹಿಂದಿರುಗುತ್ತಿದ್ದಾಗ ನಾರಾವಿ ಕಡೆಯಿಂದ ಬರುತ್ತಿದ್ದ ಕಾರೊಂದು ಆಟೋ ಗೆ ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ, ಕಾರು ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಕಾರ್ಕಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply