ಪಾಲ್ತಾಡಿ : ಬಸ್‌ತಂಗುದಾಣದಲ್ಲಿ ಮಲಗಿದ್ದಲ್ಲೇ ವ್ಯಕ್ತಿ ಸಾವು

Share the Article

ಸವಣೂರು : ಪಾಲ್ತಾಡಿ ಗ್ರಾಮದ ಅಂಕತ್ತಡ್ಕ ಜಂಕ್ಷನ್ ಬಳಿ ಇರುವ ಪ್ರಯಾಣಿಕರ ತಂಗುದಾಣದಲ್ಲಿ ವ್ಯಕ್ತಿಯೊಬ್ಬರು ಮಗಿದ್ದಲ್ಲೇ ಮೃತಪಟ್ಟ ಘಟನೆ ಜ.25ರಂದು ವರದಿಯಾಗಿದೆ.

ಮೃತಪಟ್ಟ ವ್ಯಕ್ತಿಯನ್ನು ಪೆರುವಾಜೆ ಗ್ರಾಮದ ಕಾಪಿನಕಾಡು ಮಣಿ ಮೇಸ್ತ್ರಿ ಎಂಬವರ ಪುತ್ರ ಮೂರ್ತಿ (42) ಎಂದು ಗುರುತಿಸಲಾಗಿದೆ.

ಮೂರ್ತಿ ಕುಡಿತದ ಅಭ್ಯಾಸ ಹೊಂದಿದ್ದು ಆದಿತ್ಯವಾರ ರಾತ್ರಿ ಬಸ್ ತಂಗುದಾಣದಲ್ಲೇ ಮಲಗಿದ್ದು,ಸೋಮವಾರ ಬೆಳಗ್ಗೆ ಕೆಲವರ ಜತೆ ಮಾತನಾಡಿದ್ದು,ಮಧ್ಯಾಹ್ನದ ವೇಳೆಗೆ ನೋಡಿದಾಗ ಮಲಗಿದ್ದಲ್ಲೇ ಮೃತಪಟ್ಟ ಸ್ಥಿತಿಯಲ್ಲಿದ್ದರು.

ಈ ಕುರಿತು ಬೆಳ್ಳಾರೆ ಪೊಲೀಸರು ಆಗಮಿಸಿ,ಪರಿಶೀಲನೆ ನಡೆಸಿದ್ದಾರೆ.

Leave A Reply