ಮನೆ ಬಾಗಿಲಿಗೇ ದಿಢೀರಾಗಿ ಸಾಲುಗಟ್ಟಿ ಬಂತು ಲಕ್ಷಾಂತರ ಮೌಲ್ಯದ ವಸ್ತುಗಳು | ಪೋಷಕರಿಗೆ ನಂತರ ಗೊತ್ತಾದದ್ದು ಪೋರನ ಕೈ ಚಳಕ !

Share the Article

ಮಕ್ಕಳ ಕೈಗೆ ಮೊಬೈಲ್ ಕೊಡಬಾರದು ಎಂದು ತಜ್ಞರು ಸಲಹೆ ನೀಡುತ್ತಾರೆ. ಅವರು ಈ ವಸ್ತುಗಳನ್ನು ಹಾಳು ಮಾಡುತ್ತಾರೆಂದೋ ಅಥವಾ ಮಕ್ಕಳಿಗೆ ಅವುಗಳ ಗೀಳು ಹಚ್ಚಬಾರದು ಎಂದು. ಅಷ್ಟೂ ಮಾತ್ರವಲ್ಲದೇ ಮಕ್ಕಳ ಕೈಗೆ ಮೊಬೈಲ್ ಕೊಟ್ಟರೆ ಎಡವಟ್ಟು ಆಗುವುದು ಕೂಡ ಇದೆ.

ಇದಕ್ಕೆ ಪೂರಕವೆಂಬಂತೆ ಇಲ್ಲೊಬ್ಬ ಪುಟಾಣಿ ತನ್ನ ತಾಯಿಯ ಮೊಬೈಲ್ ನಲ್ಲಿ ಆಟವಾಡುತ್ತ ಏನನ್ನೋ ಒತ್ತಿದ್ದಾನೆ. ಸ್ವಲ್ಪ ದಿನದಲ್ಲಿ ಮನೆ ಬಾಗಿಲಿಗೆ ಸಾಲು ಸಾಲಾಗಿ ವಸ್ತುಗಳು ಬರತೊಡಗಿದೆ. ಇದು ಎಲ್ಲಿಂದ? ಯಾರು ಕಳಿಸಿದ್ದು ಎಂದು ಗೊತ್ತಾಗದೇ ಪೋಷಕರು ಕಂಗಾಲು. ಆದರೆ ನಿಜ ವಿಷಯ ಏನೆಂದು ಅರಿವಾಗುವಷ್ಟರಲ್ಲಿ ಬಹಳ ಸಮಯವೇ ಹಿಡಿಯಿತು. ಈಗ ಅಷ್ಟಕ್ಕೂ ಅಲ್ಲಿ ಆಗಿದ್ದೇನು ? ಈ ವಸ್ತುಗಳು ಹೇಗೆ ಬಂದವು ? ಯಾರು ಆರ್ಡರ್ ಮಾಡಿದರು ? ಬನ್ನಿ ತಿಳಿಯೋಣ.

ಈ ಘಟನೆ ನಡೆದಿರುವುದು ನ್ಯೂಜೆರ್ಸಿಯಲ್ಲಿ. ಈ ಯಡವಟ್ಟು ಮಾಡಿರುವುದು 22 ತಿಂಗಳ ಮಗು ಅಂದರೆ ನೀವು ನಂಬಲೇ ಬೇಕು. ಅಯಾಂಶ್ ಕುಮಾರ್ ಅಂತ ಹೆಸರು. ಈತ ಇ ಕಾಮರ್ಸ್ ವೆಬ್ಸೈಟ್ ಆದ ವಾಲ್ ಮಾರ್ಟ್ ನಿಂದ ಬರೋಬ್ಬರಿ 2000 ಡಾಲರ್ ಅಂದರೆ ₹1.4 ಲಕ್ಷ ಮೊತ್ತದ ಪೀಠೋಪಕರಣಗಳನ್ನು ಖರೀದಿ ಮಾಡಿದ್ದಾನೆ. ಅಂದ ಹಾಗೆ ಇದು ಆತನಿಗೆ ಅವನ ತಾಯಿ ಮೊಬೈಲ್ ಕೊಟ್ಟಿದ್ದರಿಂದ ಆದದ್ದು.

ವಾಲ್ ಮಾರ್ಟ್ ವೆಬ್ಸೈಟ್ ನಲ್ಲಿ ಹಲವಾರು ವಸ್ತುಗಳನ್ನು ಕಾರ್ಟ್ ಹಾಕಿದ್ದರು ಅಯಾಂಶ್ ಅವರ ತಾಯಿ. ಅದರಲ್ಲಿ ಕೆಲವೊಂದನ್ನು ಆಯ್ಕೆ ಮಾಡಿ ಯಾವುದು ಇಷ್ಟ ಆಗುತ್ತೆ ಅದನ್ನು ಖರೀದಿ ಮಾಡುವ ಉದ್ದೇಶದಿಂದ ಹಾಗೆ ಮಾಡಿದ್ದರು. ಆದರೆ ಮಗನ ಕೈಗೆ ಮೊಬೈಲ್ ಕೊಟ್ಟಿದ್ದರಿಂದ ಎಲ್ಲಾ ವಸ್ತುಗಳು ಮನೆ ಬಾಗಿಲಿಗೆ ಬಂದಿದೆ.

ಅದರಲ್ಲೂ ಈ ಆರ್ಡರ್ ಮಾಡಿದ ವಸ್ತುಗಳಲ್ಲಿ ಕೆಲವೊಂದು ಎಷ್ಟೊಂದು ದೊಡ್ಡದಿತ್ತು ಎಂದರೆ ಅವುಗಳನ್ನು ಮನೆ ಬಾಗಿಲೊಳಗೆ ತರೋದಕ್ಕೆನೇ ಕಷ್ಟವಾಗಿತ್ತಂತೆ.

ಇದನ್ನೆಲ್ಲ ನೋಡಿದ ಅಯಾಂಶ್ ತಾಯಿ, ಹಾಗೂ ಮಗ ಈ ರೀತಿ ಮಾಡಿದ್ದಕ್ಕೆ ಪ್ರತಿಕ್ರಿಯೆ ನೀಡುತ್ತಾ, ಆತ ಇನ್ನೂ ಪುಟ್ಟ ಹುಡುಗ, ಇವನೇ ಈ ಎಲ್ಲಾ ವಸ್ತುಗಳನ್ನು ಆರ್ಡರ್ ಮಾಡಿದ್ದಾನೆ ಎಂದು ನಮಗೆ ತಿಳಿದಾಗ ನಾವೆಲ್ಲಾ ನಕ್ಕಿದ್ದೇವೆ ಎಂದಿದ್ದಾರೆ.

ಅಯಾಂಶ್ ತಂದೆ ಅವರು, ‘ ಮೊಬೈಲ್ ಸ್ಕ್ರೀನ್ ಓಪನ್ ಮಾಡಲು ಕಷ್ಟವಾಗುವಂತಹ ಪಾಸ್ ವರ್ಡ್ ಗಳ‌ನ್ನು ಹಾಕಿಡುವುದಾಗಿ ಹೇಳಿದ್ದಾರೆ. ಸದ್ಯಕ್ಕೆ ಈ ಘಟನೆ ಅಂತರ್ಜಾಲದಲ್ಲಿ ವೈರಲ್ ಆಗಿದೆ.

Leave A Reply